ನ್ಯೂಸ್

ತಿರುಮಲದಲ್ಲಿ ಕಾಲ್ತುಳಿತ: ಹಲವರಿಗೆ ಗಾಯ!

ತಿರುಪತಿ: ತಿಮ್ಮಪ್ಪನ ಸನ್ನಿಧಿಯಲ್ಲಿ ಮತ್ತೊಂದು ದುರಂತ ಸಂಭವಿಸಿದೆ. ಮಂಗಳವಾರ ಬೆಳ್ಳಂಬೆಳಗೆ ಕಾಲ್ತುಳಿತ ಸಂಭವಿಸಿ ಹಲವು ಭಕ್ತರು ಗಾಯಗೊಂಡಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ಪೊಲೀಸರು ಹರಸಾಹಸ ಪಡುವಂತಾಯಿತು.

ಟಿಟಿಡಿಯಿಂದ ನೀಡಲಾಗುವ ಸೇವಾದರ್ಶನ ಟಿಕೆಟ್​ ಪಡೆಯುವ ವೇಳೆ ಭಕ್ತರಲ್ಲಿ ಕಾಲ್ತುಳಿತ ಸಂಭವಿಸಿದೆ. ತಿಮ್ಮಪ್ಪನ ದರ್ಶನಕ್ಕಾಗಿ ಟಿಟಿಡಿ ಉಚಿತ ಟಿಕೆಟ್​ ನೀಡುತ್ತಿದೆ. ಇದನ್ನು ಪಡೆಯಲು ಭಕ್ತರು ಮುಗಿಬಿದ್ದಿದ್ದರಿಂದ ಕಾಲ್ತುಳಿತ ಸಂಭವಿಸಿದೆ.

ಎರಡು ದಿನಗಳಿಂದ ಭಕ್ತರು ಟಿಕೆಟ್​ಗಾಗಿ ಕಾದು ಕುಳಿತಿದ್ದರು. ಆಂಧ್ರಪ್ರದೇಶದ ತಿರುಪತಿ ತಿರುಮಲ ದೇವಾಲಯದಲ್ಲಿ ಕಳೆದ ವರ್ಷ ಪ್ರವಾಹದಿಂದ ಕೆಲದಿನಗಳ ಕಾಲ ದೇವಸ್ಥಾನವನ್ನು ಮುಚ್ಚಲಾಗಿತ್ತು.