ನ್ಯೂಸ್

ಭೂಮಿಯತ್ತ ಬರುತ್ತಿರುವ ಸ್ಟೇಡಿಯಂ ಗಾತ್ರದ​ ಕ್ಷುದ್ರಗ್ರಹದ ಮೇಲೆ ನಾಸಾ ಕಣ್ಣು: ಗಂಟೆಗೆ 28,800 ಕಿ.ಮೀ ವೇಗ!

ನವದೆಹಲಿ: ಸ್ಟೇಡಿಯಂ ಗಾತ್ರದ ಬೃಹತ್​ ಕ್ಷುದ್ರಗ್ರಹವು ಅತ್ಯಂತ ವೇಗವಾಗಿ ಭೂಮಿಯತ್ತ ಧಾವಿಸಿ ಬರುತ್ತಿದ್ದು, '2008Go20' ಹೆಸರಿನ ಕ್ಷುದ್ರಗ್ರಹವು ಜುಲೈ 24ರಂದು ಭೂಮಿಯ ಹಿಂದೆ ಸುರಕ್ಷಿತವಾಗಿ ಹಾದು ಹೋಗಲಿದೆ.

ಕ್ಷುದ್ರಗ್ರಹವು ಪ್ರತಿ ಸೆಕೆಂಡ್​ಗೆ 8 ಕಿ.ಮೀ ವೇಗದಲ್ಲಿ ಅಂದರೆ, ಪ್ರತಿ ಗಂಟೆಗೆ 28,800 ಕಿ.ಮೀ ವೇಗದಲ್ಲಿ ಕ್ಷುದ್ರಗ್ರಹ ಚಲಿಸುತ್ತಿದೆ. ಇದು ಊಹೆಗೂ ಮೀರಿದ ವೇಗವಾಗಿದ್ದು, ಕ್ಷುದ್ರಗ್ರಹದ ಹಾದಿಯಲ್ಲಿ ಏನೇ ಎದುರಾದರೂ ಅದರ ಪರಿಸ್ಥತಿ ಅತ್ಯಂತ ದುರಂತವಾಗಿರುತ್ತದೆ.

ಕ್ಷುದ್ರಗ್ರಹವನ್ನು ಭೂಮಿಯ ಹತ್ತಿರದ ವಸ್ತು (ಎನ್​ಇಒ) ಅಂತಲೂ ಕರೆಯಲಾಗುತ್ತದೆ. 20 ಮೀಟರ್​ ಅಗಲವಾಗಿರುವ ಕ್ಷುದ್ರಗ್ರವು, ಭೂಮಿ ಮತ್ತು ಚಂದ್ರನ ನಡುವಿನ ಎಂಟು ಪಟ್ಟು ಅಂದರೆ 28,70,847,607 ಕಿ.ಮೀ ದೂರದಲ್ಲಿಯೂ ಜೂಮ್​ ಆಗಲಿದೆ. ಆದರೆ, ಈ ಕ್ಷುದ್ರಗ್ರಹದಿಂದ ಭೂಮಿಗೆ ಯಾವುದೇ ತೊಂದರೆ ಇಲ್ಲ. ಜುಲೈ 24ರಂದು ಭೂಮಿಯ ಹಿಂದೆ ಸುರಕ್ಷಿತವಾಗಿ ಹಾದು ಹೋಗಲಿದೆ.

ಗ್ರಹಕ್ಕೆ ಹತ್ತಿರವಿರುವ ಅದರ ಕಕ್ಷೆಯನ್ನು ಅಪೊಲೋ ಎಂದು ವರ್ಗೀಕರಿಸಲಾಗಿದೆ. ಅಪೊಲೋ ಅತ್ಯಂತ ಅಪಾಯಕಾರಿ ಕ್ಷುದ್ರಗ್ರಹಗಳನ್ನು ಹೊಂದಿದೆ. ನಾಸಾ ನಿರಂತರವಾಗಿ ಕ್ಷುದ್ರಗ್ರಹವನ್ನು ಮೇಲ್ವಿಚಾರಣೆ ಮಾಡುತ್ತಿದೆ.

ಇದಕ್ಕು ಮುಂಚೆ ಜೂನ್​ನಲ್ಲಿ 2021KT1 ಹೆಸರಿನ ಐಫೆಲ್​ ಟವರ್ ಗಾತ್ರದ​ ಕ್ಷುದ್ರಗ್ರಹವು ಭೂಮಿಯ ಹತ್ತಿರಕ್ಕೆ ಬಂದಿತ್ತು. ಇದನ್ನು "ಸಂಭಾವ್ಯ ಅಪಾಯಕಾರಿ" ಎಂದು ವರ್ಗೀಕರಿಸಲಾಗಿದೆ. 2021KT1 ಕ್ಷುದ್ರಗ್ರಹವು 1 4.5 ದಶಲಕ್ಷ ಕಿ.ಮೀ ದೂರದಲ್ಲಿ ಭೂಮಿಗೆ ಹತ್ತಿರದ ಮಾರ್ಗದಲ್ಲಿ ಬಂದಿತ್ತು. (ಏಜೆನ್ಸೀಸ್​)