ಮಂಗಳೂರು : ಬುಧವಾರ ತಡರಾತ್ರಿ ಸುರತ್ಕಲ್ ಗಣೇಶಪುರದಲ್ಲಿ ಯುವಕನೊಬ್ಬನಿಗೆ ದುಷ್ಕರ್ಮಿಗಳು ಚೂರಿಯಿಂದ ಇರಿದಿದ್ದಾರೆ. ಮೊಹಮ್ಮದ್ ಜಾವೀದ್ ಇರಿತಕ್ಕೊಳಗಾದವರು. ಅವರನ್ನು ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅಪಾಯದಿಂದ ಪಾರಾಗಿರುವುದಾಗಿ ಸುರತ್ಕಲ್ ಪೊಲೀಸರು ತಿಳಿಸಿದ್ದಾರೆ.