ಮುಂಬೈ:ನಟ ಸೈಫ್ ಅಲಿ ಖಾನ್‌ಗೆ(Saif Ali Khan) ಚಾಕು ಇರಿತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಗಳನ್ನು ಜೈಲಿಗಟ್ಟಿದ್ದು ಚಾಕು ಇರಿತಕ್ಕೆ ಕಾಣಣವೇನು ಎಂಬುವುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದೆಲ್ಲದರ ನಡುವೆ ಸೈಫ್ ದಾಖಲೆಯ ಆಸ್ಪತ್ರೆಯ ಬಿಲ್ ಬಗ್ಗೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಮತ್ತೊಮ್ಮೆ ಚರ್ಚೆ ಹುಟ್ಟು ಹಾಕಿದೆ.
ನಟ ಸೈಫ್ ಅಲಿ ಖಾನ್‌ಗೆ (Saif Ali Khan) ಆರೋಪಿಯು ದೇಹದ ಆರು ಕಡೆ ಇರಿದಿದ್ದು, ವೈದ್ಯರು ಸರ್ಜರಿ ಮೂಲಕ ಚಾಕುವನ್ನು ಹೊರತೆಗೆದಿದ್ದಾರೆ. ಸದ್ಯ ವೈರಲ್ ಆಗಿರುವ ಆಸ್ಪತ್ರೆಯ ಬಿಲ್ ನೋಡುವುದಾದರೆ ಜನವರಿ 21ರಂದು ನಟ ಸೈಫ್ ಅಲಿ ಖಾನ್‌ರನ್ನು ಡಿಸ್ಟಾರ್ಜ್ ಮಾಡಕಲಾಗುತ್ತದೆ ಎಂದು ಉಲ್ಲೇಖಿಸಲಾಗಿದ್ದು. ಆಸ್ಪತ್ರೆ ಬಿಲ್ 35.98 ಲಕ್ಷ ರೂಪಾಯಿ ಆಗಿದೆ ಎಂದು ಹೇಳಲಾಗಿದೆ.
ಸೈಫ್ ಅಲಿ ಖಾನ್ ಅವರ ಆಸ್ಪತ್ರೆ ಬಿಲ್ 35.95 ಲಕ್ಷ ರೂಪಾಯಿ ಖರ್ಚಾಗಿದೆ. ಇನ್ಸೂರೆನ್ಸ್ ಕಂಪನಿ ಕಡೆಯಿಂದ 25 ಲಕ್ಷ ರೂಪಾಯಿ ಸಿಕ್ಕಿದೆ ಎಂದು ವರದಿ ಆಗಿದೆ. ಕೇವಲ 5ರಿಂದ 7ದಿನಗಳ ಅಂತರದಲ್ಲಿ ಬರೊಬ್ಬರಿ 35 ಲಕ್ಷ ರೂ. ಬಿಲ್ ಎಂದಾಗ ಜನ ಸಾಮಾನ್ಯರು ಬೆಚ್ಚಿ ಬಿದ್ದಿದ್ದರು. ಇದೀಗ ಬಿಲ್ ಬಗ್ಗೆ ಸ್ವತ ವೈದ್ಯರುಗಳೇ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.
ಮುಂಬೈ ಮೂಲದ ಹೃದಯ ಶಸ್ತ್ರಚಿಕಿತ್ಸಕ ಪ್ರಶಾಂತ್ ಮಿಶ್ರಾ, ಆಸ್ಪತ್ರೆಗಳ ಪ್ರೀಮಿಯಂ ಬಿಲ್ಲಿಂಗ್ ಪದ್ಧತಿಯನ್ನು ಇದೀಗ ಪ್ರಶ್ನೆ ಎತ್ತಿದ್ದಾರೆ.
5-7 ದಿನಗಳ ಆಸ್ಪತ್ರೆಗೆ ಅಗತ್ಯವಿರುವ ಇರಿತದ ಗಾಯಕ್ಕೆ ಇಂತಹ ವಿಪರೀತ ಶುಲ್ಕಗಳು ಏಕೆ? ಹೆಚ್ಚಿನ ಆಸ್ಪತ್ರೆಗಳು ಇಂತಹ ಪ್ಯಾಕೇಜ್ ವ್ಯವಸ್ಥೆಯನ್ನು ಹೊಂದಿವೆಯೇ?, ಎಂದು ಅವರು ತಮ್ಮ ಎಕ್ಸ್‌ನಲ್ಲಿ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ತೆರೆದ ಬಿಲ್ಲಿಂಗ್(ಒಪನ್ ಬಿಲ್ಲಿಂಗ್) ವ್ಯವಸ್ಥೆಯು ಸಲ್ಲಿಸಿದ ಸೇವೆಗಳ ಆಧಾರದ ಮೇಲೆ ವೆಚ್ಚಗಳು ಬದಲಾವಣೆಯಾಗುತ್ತಿವೆ. ಫಿಕ್ಸ್ ಪ್ಯಾಕೇಜ್ ವ್ಯವಸ್ಥೆಗಳು ಅನೇಕ ಆಸ್ಪತ್ರೆಗಳಲ್ಲಿ ಸಾಮಾನ್ಯವಾಗಿದ್ದು, ಪ್ರಮಾಣೀಕೃತ ಶುಲ್ಕಗಳು ಹೆಚ್ಚಿನ ಪಾರದರ್ಶಕತೆಯನ್ನು ನೀಡುತ್ತವೆ. ಆದರೆ, ಇಂತಹ ದುಬಾರಿ ಶುಲ್ಕಗಳು ವೈದ್ಯಕೀಯ ವೆಚ್ಚಗಳಲ್ಲಿ ಆಗಾಗ್ಗೆ ಅನಿರೀಕ್ಷಿತತೆಗೆ ಕಾರಣವಾಗುತ್ತದೆ.
ಅಲ್ಲದೆ, ದುಬಾರಿ ಬಿಲ್ಲಿಂಗ್ಗಳಿಂದ ಮಧ್ಯಮ ವರ್ಗದ ಮೇಲೆ ನೇರವಾಗಿ ಪರಿಣಾಮ ಬೀರುತ್ತವೆ. ಏಕೆಂದರೆ ವಿಮಾ ಕಂಪನಿಗಳಿಂದ ಹೆಚ್ಚುತ್ತಿರುವ ಪಾವತಿಗಳು ಸಾಮಾನ್ಯ ಜನರಿಗೆ ಹೆಚ್ಚಿನ ಪ್ರೀಮಿಯಂಗಳಿಗೆ ಕಾರಣವಾಗುತ್ತವೆ ಎಂದು ಮಿಶ್ರಾ ಪ್ರತಿಪಾದಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಫೋಟೋ ನೋಡುವುದಾದರೆ ನಿವಾ ಬುಪಾ ಹೆಲ್ತ್ ಇನ್ಸೂರೆನ್ಸ್' ಪಡೆದಿದ್ದಾರೆ. ಸೈಫ್ ಅವರ ಆಸ್ಪತ್ರೆ ಬಿಲ್ 35.98 ಲಕ್ಷ ರೂಪಾಯಿ. ಇನ್ಸೂರೆನ್ಸ್ ಕಂಪನಿಯಿಂದ 25 ಲಕ್ಷ ಅಪೂವ್ ಸಿಕ್ಕಿದೆ ಎಂದು ಉಲ್ಲೇಖಿಸಲಾಗಿದೆ. ಲೆಟರ್‌ನಲ್ಲಿ ಮೆಂಬರ್ ಐಡಿ, ರೂಂ ಕ್ಯಾಟೆಗರಿ ಇತ್ಯಾದಿ ವಿಚಾರಗಳನ್ನು ಉಲ್ಲೇಖಿಸಲಾಗಿದೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸತ್ಯಾಸತ್ಯತೆ ಇನ್ನಷ್ಟೇ ತಿಳಿದು ಬರಬೇಕಿದೆ.(ಏಜೆನ್ಸೀಸ್)