ನ್ಯೂಸ್

ಎಸ್​ಎಸ್​ಎಲ್​ಸಿ ಪರೀಕ್ಷೆಗೂ ಮುನ್ನವೇ ದುರಂತ ಅಂತ್ಯಕಂಡ ವಿದ್ಯಾರ್ಥಿನಿ

arunakunigal

ಬೆಳಗಾವಿ: ಇಂದು ಎಸ್​ಎಸ್ಎಲ್​ಸಿ ಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಶಹಾಪುರದ ಕಲ್ಮೇಶ್ವರ ನಗರದ ಸುಜಾತಾ ಸುಭಾಷ್ ಡಗೆ (16) ಆತ್ಮಹತ್ಯೆ ಮಾಡಿಕೊಂಡವಳು. ಪರೀಕ್ಷೆ ಭಯದಲ್ಲಿ ಖಿನ್ನತೆಗೆ ಒಳಗಾಗಿದ್ದ ವಿದ್ಯಾರ್ಥಿನಿ ಬುಧವಾರ ತಡರಾತ್ರಿ ಮನೆಯಲ್ಲೇ ನೇಣು ಬೀಗಿದುಕೊಂಡಿದ್ದಾಳೆ. ಇದನ್ನೂ ಓದಿರಿ ಥರ್ಮಲ್​ ಸ್ಕ್ರೀನಿಂಗ್​ ವೇಳೆ ಕುಸಿದುಬಿದ್ದ ಎಸ್​ಎಸ್​ಎಲ್​ಸಿ ವಿದ್ಯಾರ್ಥಿನಿ

ಸರಸ್ವತಿ ಶಾಲೆಯ ವಿದ್ಯಾರ್ಥಿನಿಯಾಗಿದ್ದ ಸುಜಾತಾ ಸುಭಾಷ್​ ಡಗೆ ಇಂದು ಪರೀಕ್ಷೆಗೆ ಹಾಜರಾಗಬೇಕಿತ್ತು. ಆದರೆ, ಪರೀಕ್ಷೆಗೂ ಮುನ್ನವೇ ಬದುಕನ್ನ ದುರಂತ ಅಂತ್ಯವಾಗಿಸಿಕೊಂಡಿದ್ದಾಳೆ. ಶಹಾಪುರ ಪೊಲೀಸ್​ ಠಾಣೆ ಪ್ರಕರಣ ದಾಖಲಾಗಿದೆ.