ಸಿ.ಆರ್.ಪರಮೇಶ್ವರಪ್ಪ, ಡಿಡಿಪಿಐ 
ನ್ಯೂಸ್

ಎಸ್‌ಎಸ್‌ಎಲ್‌ಸಿ ಫಲಿತಾಂಶ: ಶಿವಮೊಗ್ಗಕ್ಕೆ 3ನೇ ಸ್ಥಾನ

ಅರವಿಂದ ಅಕ್ಲಾಪುರ

ಶಿವಮೊಗ್ಗ: ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಜಿಲ್ಲೆ ಅಭೂತಪೂರ್ವ ಸಾಧನೆ ಮಾಡಿದ್ದು, ಇದೇ ಮೊದಲ ಬಾರಿಗೆ ರಾಜ್ಯದಲ್ಲೇ ಮೂರನೇ ಸ್ಥಾನ ಪಡೆದಿದೆ. ಕಳೆದ ವರ್ಷ ಶೇ.84.04 ಫಲಿತಾಂಶದೊಂದಿಗೆ 29ನೇ ಸ್ಥಾನದಲ್ಲಿದ್ದ ಶಿವಮೊಗ್ಗ, ಈ ಬಾರಿ ಶೇ. 88.67 ಫಲಿತಾಂಶದೊಂದಿಗೆ ಮೂರನೇ ಸ್ಥಾನಕ್ಕೇರಿದೆ.

ಪರೀಕ್ಷೆ ಎದುರಿಸಿದ 23,028 ವಿದ್ಯಾರ್ಥಿಗಳ ಪೈಕಿ 20,420 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇದರೊಂದಿಗೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರ ತವರು ಜಿಲ್ಲೆ ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಿದೆ. 2022ರಲ್ಲಿ ಶಿವಮೊಗ್ಗ 26ನೇ ಸ್ಥಾನ ಪಡೆದಿತ್ತು. 2021ರಲ್ಲಿ ಕರೊನಾ ಕಾರಣದಿಂದ ಎಸ್‌ಎಸ್‌ಎಲ್‌ಸಿಯ ಎಲ್ಲ ವಿದ್ಯಾರ್ಥಿಗಳನ್ನೂ ಉತ್ತೀರ್ಣ ಮಾಡಲಾಗಿತ್ತು. 2020ರಲ್ಲಿ ಜಿಲ್ಲೆ 18ನೇ ಸ್ಥಾನದಲ್ಲಿತ್ತು.
2019ರ ಎಸ್‌ಎಎಲ್‌ಸಿ ಫಲಿತಾಂಶದಲ್ಲಿ ಶಿವಮೊಗ್ಗ ಜಿಲ್ಲೆ ಶೇ. 79.13 ಫಲಿತಾಂಶದೊಂದಿಗೆ ರಾಜ್ಯದಲ್ಲಿ 21ನೇ ಸ್ಥಾನದಲ್ಲಿತ್ತು. ಅದಕ್ಕೂ ಮುನ್ನ 2018ರಲ್ಲಿ 20 ಹಾಗೂ 2017ರಲ್ಲಿ 15ನೇ ಸ್ಥಾನ ಪಡೆದಿತ್ತು. ಈಗ ಹಳೆಯ ದಾಖಲೆಗಳೆಲ್ಲ ನುಚ್ಚು ನೂರಾಗಿದ್ದು, ರಾಜ್ಯದಲ್ಲಿ ಮೂರನೇ ಸ್ಥಾನ್ಕಕೇರುವ ಮೂಲಕ ಶಿವಮೊಗ್ಗ ಜಿಲ್ಲೆ ಗಮನಸೆಳೆದಿದೆ.
ಲಿತಾಂಶ ಹೆಚ್ಚಳಕ್ಕಾಗಿ ರಚಿಸಲಾಗಿದ್ದ ಅಧಿಕಾರಿಗಳು, ಶಿಕ್ಷಕರ ತಂಡ ಮಕ್ಕಳ ಕಲಿಕೆಗೆ ಒತ್ತು ನೀಡುವ ಜತೆಗೆ ಜನವರಿಯಿಂದಲೇ ಪುನರಾವರ್ತನೆ ಆರಂಭಿಸಿದರು. ಶಾಲಾ ಹಂತ, ತಾಲೂಕು ಹಂತ ಜಿಲ್ಲಾ ಮಟ್ಟದಲ್ಲಿಯೂ ಪೂರ್ವಭಾವಿ ಪರೀಕ್ಷೆಗಳನ್ನು ನಡೆಸಲಾಯಿತು. ಇವುಗಳು ಲಿತಾಂಶ ಹೆಚ್ಚಳಕ್ಕೆ ಕಾರಣವಾಗಿವೆ ಎಂದು ಡಿಡಿಪಿಐ ಸಿ.ಆರ್.ಪರಮೇಶ್ವರಪ್ಪ ತಿಳಿಸಿದ್ದಾರೆ.