ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಎಸ್ಎಸ್ಎಲ್ಸಿ ಪರೀಕ್ಷೆಗೆ ಸಂಬಂಧಿಸಿದ ಎಲ್ಲ ವಿಷಯಗಳ ಕೀ ಉತ್ತರಗಳನ್ನು ಭಾನುವಾರ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ವಿದ್ಯಾರ್ಥಿಗಳು ಏ.18ರವರೆಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ನೀಡಿದೆ.
ಮಂಡಳಿಯ ವೆಬ್‌ಸೈಟ್ https://kseab.karnataka.gov.in/ ನಲ್ಲಿ ಕೀ ಉತ್ತರಗಳನ್ನು ಪ್ರಕಟಿಸಲಾಗಿದೆ. ವಿದ್ಯಾರ್ಥಿಗಳು ಈ ಕೀ ಉತ್ತರಗಳನ್ನು ಪರಿಶೀಲಿಸಿ ಮುಂದಿನ ಮೂರು ದಿನಗಳ ಒಳಗೆ ಆನ್‌ಲೈನ್‌ನಲ್ಲಿ ಮಾತ್ರ ಆಕ್ಷೇಪಣೆ ಸಲ್ಲಿಸಬಹುದು.
ಇದನ್ನೂ ಓದಿ: ತಾನೂ ಕೋಟ್ಯಧಿಪತಿ, ಮಕ್ಕಳಿಬ್ಬರೂ ಕೋಟ್ಯಧಿಪತಿ, ಹೆಂಡತಿಯೂ ಕೋಟಿ ರೂ. ಮೌಲ್ಯದ ಚಿನ್ನಾಭರಣದ ಒಡತಿ, ಆದ್ರೆ ಸ್ವಂತ ಕಾರಿಲ್ಲ!
ಆಕ್ಷೇಪಣೆಗಳನ್ನು ಸಲ್ಲಿಸಲು ಮಂಡಳಿಯ ಅಂತರ್ಜಾಲದಲ್ಲಿ ಲಾಗಿನ್ ಆಗಿ ನೋಂದಣಿ ಸಂಖ್ಯೆಯನ್ನು ದಾಖಲಿಸಬೇಕು. ನೋಂದಾಯಿತ ಮೊಬೈಲ್ಫೋನ್ ಸಂಖ್ಯೆಗೆ ಬರುವ ಒಟಿಪಿ ಬಳಸಿ ಏ.18ರೊಳಗೆ ಆಕ್ಷೇಪಣೆಗಳನ್ನು ಸಲ್ಲಿಸಬಹುದು ಎಂದು ತಿಳಿಸಿದೆ.