ನ್ಯೂಸ್

ಶ್ರೀವಾರಿ ಭಜನಾ ಮಂಡಳಿಯಿಂದ ಕೃಷ್ಣ ಜನ್ಮಾಷ್ಟಮಿ ಆಚರಣೆ

ರಾಣೆಬೆನ್ನೂರ: ಶ್ರೀ ಕೃಷ್ಣ ಜನ್ಮಾಷ್ಟಮಿ ನಿಮಿತ್ತ ಇಲ್ಲಿಯ ಮೃತ್ಯುಂಜಯ ನಗರದ ಶ್ರೀ ವಾರಿ ಭಜನಾ ಮಂಡಳಿ ವತಿಯಿಂದ ಶ್ರೀ ಕೃಷ್ಣನ ಗೀತೆಗಳನ್ನು ಹೇಳುವುದರ ಮೂಲಕ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಿಸಲಾಯಿತು. ಪ್ರಮುಖರಾದ ರೇಣುಕಾ ಕುರುಬರ, ನೀತಾ ನೆಸ್ವಿ, ಸುಧಾ ಬಿ.ಎಸ್​., ಪುಷ್ಪಾ ಅಬ್ಬಿಗೇರಿ, ಕವಿತಾ ಹಂಸಾಗರ, ರಾಧಾ ವಿಠ್ಠಲಕರ ಮತ್ತಿತರರು ಇದ್ದರು.