ನ್ಯೂಸ್

ರಾಮಸೇತುವೆ ದರ್ಶನ, ಆಶೀರ್ವಾದ ಸಿಕ್ಕಿತು! ರಾಮ ನವಮಿಗೆ ಎಲ್ಲಾ ಜನತೆಗೆ ಶುಭ ಹಾರೈಸಿದ ನರೇಂದ್ರ ಮೋದಿ|Modi

Modi | ಇಂದು ಎಲ್ಲೆಡೆ ಶ್ರೀರಾಮ ನವಮಿಯನ್ನ ಭಕ್ತಿಯಿಂದ ಆಚರಣೆ ಮಾಡಲಾಗ್ತಾ ಇದೆ. ಇನ್ನೂ ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಶ್ರೀಲಂಕಾದಿಂದ ಹಿಂತಿರುಗುವಾಗ, ರಾಮಸೇತುವಿನ ದರ್ಶನ ಪಡೆದು ಎಲ್ಲರಿಗೂ ರಾಮ ನವಮಿಯ ಶುಭಾಷಯ ಕೋರಿದ್ದಾರೆ.

ಈ ಬಗ್ಗೆ ಮೋದಿ ಟ್ವೀಟ್​ ಮಾಡಿದ್ದು, ಸ್ವಲ್ಪ ಸಮಯದ ಹಿಂದೆ ನನಗೆ ರಾಮಸೇತುವಿನ ಆಶೀರ್ವಾದವೂ ಸಿಕ್ಕಿತು. ಕಾಕತಾಳೀಯವಾಗಿ ಅಯೋಧ್ಯೆಯಲ್ಲಿ ಸೂರ್ಯ ತಿಲಕ ನಡೆಯುತ್ತಿರುವ ಸಮಯದಲ್ಲಿಯೇ ರಾಮ ಸೇತುವಿನ ಆಶೀರ್ವಾದ ಪಡೆದದ್ದು ನನಗೆ ಕುಷಿಯಾಯ್ತು. ಪ್ರಭು ಶ್ರೀ ರಾಮ ನಮ್ಮೆಲ್ಲರಿಗೂ ಶಕ್ತಿ ನೀಡಲಿ ಹಾಗೂ ಅವರ ಆಶೀರ್ವಾದ ಯಾವಾಗಲೂ ನಮ್ಮ ಮೇಲೆ ಇರಲಿ ಎಂದು​ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

(ಏಜೆನ್ಸೀಸ್)