ಶಿವಮೊಗ್ಗದಲ್ಲಿ ಶ್ರೀಗಂಧ ಸಾಂಸ್ಕೃತಿಕ ಸಂಸ್ಥೆಯ ಸಂಚಾಲಕ ಕೃಷ್ಣಾನಂದ ಮಾತನಾಡಿದರು. ಸಂಸ್ಥೆ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ, ಎಂ.ಶಂಕರ್ ಸುದ್ದಿಗೋಷ್ಠಿಯಲ್ಲಿದ್ದರು. 
ನ್ಯೂಸ್

24ಕ್ಕೆ ಶ್ರೀನಿವಾಸ ಕಲ್ಯಾಣ ಮಹೋತ್ಸವ

ಶಿವಮೊಗ್ಗ: ಶ್ರೀಗಂಧ ಸಾಂಸ್ಕೃತಿಕ ಸಂಸ್ಥೆಯಿಂದ ಆ.24ರ ಸಂಜೆ 5.30ಕ್ಕೆ ವಿನೋಬನಗರದ ಶುಭಮಂಗಳ ಸಮುದಾಯ ಭವನದಲ್ಲಿ ಅದ್ದೂರಿಯಾಗಿ ಶ್ರೀನಿವಾಸ ಕಲ್ಯಾಣ ನಡೆಸಲಾಗುವುದು ಎಂದು ಸಂಸ್ಥೆಯ ಸಂಚಾಲಕ ಕೃಷ್ಣಾನಂದ ಹೇಳಿದರು.

ದಾಸ ಸಾಹಿತ್ಯ ಪದ್ಧತಿಯಲ್ಲಿ ಬೆಂಗಳೂರಿನ ಶ್ರೀವಾರಿ ಫೌಂಡೇಶನ್‌ನ ಎಸ್.ವೆಂಕಟೇಶಮೂರ್ತಿ ಅವರು ಪುರಾಣದ ಭಾಗವಾದ ಶ್ರೀನಿವಾಸ ಕಲ್ಯಾಣವನ್ನು ನಡೆಸಿಕೊಡಲಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಶ್ರೀಗಂಧ ಸಂಸ್ಥೆಯು ಈಗಾಗಲೇ ನಾಲ್ಕು ಬಾರಿ ಶ್ರೀನಿವಾಸ ಕಲ್ಯಾಣವನ್ನು ನಗರದಲ್ಲಿ ಆಯೋಜಿಸಿದೆ. ನೋಡಿದಷ್ಟೂ ಭಕ್ತಿ ಪರವಶವಾಗುವ ಮತ್ತು ಪಾಪ ಹರಣವೆಂದೇ ಭಕ್ತರು ನಂಬುವ ಕಲ್ಯಾಣೋತ್ಸವವು ಭಕ್ತಿಯಿಂದ ಭಾಗವಹಿಸುವ ಜನರನ್ನು ಮಂತ್ರಮುಗ್ಧಗೊಳಿಸುತ್ತದೆ. ಪುರಾಣದ ಭಾಗವಾದ ಮಹೋತ್ಸವವನ್ನು ಭೂ ವೈಕುಂಠವೆಂದೇ ಕರೆಯುವ ತಿರುಪತಿಯಲ್ಲಿ ಜರುಗುವ ಮಾದರಿಯಲ್ಲೇ ಇಲ್ಲಿ ಆಚರಿಸುವುದು ವಿಶೇಷ ಎಂದರು.
ಕಲ್ಯಾಣ ಕಾರ್ಯಕ್ರಮಕ್ಕೂ ಮುನ್ನ ಗುರುಗುಹ ಸಂಗೀತ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ದಾಸರ ಪದಗಳ ಗಾಯನ ನಡೆಯಲಿದೆ. ಕಾರ್ಯಕ್ರಮದ ನಂತರ ತೀರ್ಥಪ್ರಸಾದ ವಿನಿಯೋಗ ಇರಲಿದೆ. ಸಂಸ್ಥೆ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಅವರು ತಿರುಪತಿಯಿಂದಲೇ ತರಿಸಿದ ಲಡ್ಡುಗಳನ್ನು ಭಕ್ತರಿಗೆ ವಿತರಿಸುವರು ಎಂದು ಹೇಳಿದರು.
ಸಂಸ್ಥೆ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ, ಪ್ರಮುಖರಾದ ಎಂ.ಶಂಕರ್, ಸತ್ಯನಾರಾಯಣ, ಸೂರ್ಯನಾರಾಯಣ, ಬಾಲು, ಹರೀಶ್ ಕಾರಣಿಕ್, ವಿನಾಯಕ್ ಬಾಯರಿ, ವಕೀಲ ವಾಗೀಶ್ ಸುದ್ದಿಗೋಷ್ಠಿಯಲ್ಲಿದ್ದರು.