ಶೃಂಗೇರಿ ಶ್ರೀ ಶಾರದಾಂಬೆ 
ನ್ಯೂಸ್

ಶೃಂಗೇರಿಯಲ್ಲಿ ಶರನ್ನವರಾತ್ರಿ ಮಹೋತ್ಸವಕ್ಕೆ ಸಿದ್ಧತೆ

ಶೃಂಗೇರಿ: ಶ್ರೀ ಶಾರದಾ ಪೀಠದ ಶರನ್ನವರಾತ್ರಿ ಮಹೋತ್ಸವ ಅ.2ರಿಂದ 13ರವರೆಗೆ ನೆರವೇರಲಿದೆ. 2 ರಂದು ಶ್ರೀ ಶಾರದಾಂಬಾ ಮಹಾಭಿಷೇಕ ನಡೆಯಲಿದ್ದು ಜಗತ್ಪ್ರಸೂತಿಕಾ ಅಲಂಕಾರದಲ್ಲಿ ಶ್ರೀ ಶಾರದೆ ಕಂಗೊಳಿಸಲಿದ್ದಾಳೆ. 3ರಂದು ಶಾರದಾ ಪ್ರತಿಷ್ಠೆ ಹಾಗೂ ಜಗನ್ಮಾತೆಗೆ ಹಂಸವಾಹನ ಅಲಂಕಾರ, 4ರಂದು ಬ್ರಾಹ್ಮೀ ಅಲಂಕಾರ, 5ಕ್ಕೆ ಮಾಹೇಶ್ವರಿ, 6 ಮಯೂರವಾಹನ, 7 ಗರುಡವಾಹನ ಅಲಂಕಾರ, ಶತಚಂಡೀ ಮಹಾಯಾಗದ ಸಂಕಲ್ಪ, ಪುರಶ್ಚರಣಾರಂಭ, 8 ಮೋಹಿನಿ ಅಲಂಕಾರ, 9 ಸರಸ್ವತಿ ಆವಾಹನೆ, ವೀಣಾಶಾರದೆ ಅಲಂಕಾರ, 10 ರಾಜರಾಜೇಶ್ವರಿ ಅಲಂಕಾರ, 11 ಮಹಾನವಮಿ, ಸಿಂಹವಾಹನ ಅಲಂಕಾರ, ಶತಚಂಡಿಯಾಗದ ಪೂರ್ಣಾಹುತಿ, ಗಜಾಶ್ವಪೂಜೆ, 12 ವಿಜಯದಶಮಿ, ಗಜಲಕ್ಷ್ಮೀ ಅಲಂಕಾರ, ಬೆಳಗ್ಗೆ ಲಕ್ಷ್ಮೀನಾರಾಯಣ ಹೃದಯ ಹೋಮ, ರಾಮ ಪಟ್ಟಾಭಿಷೇಕ ಸರ್ಗ ಪಾರಾಯಣ, ಸಂಜೆ ವಿಜಯೋತ್ಸವ, ಶಮೀಪೂಜೆ, 13ರಂದು ಗಜಲಕ್ಷ್ಮೀ ಅಲಂಕಾರ, ಶ್ರೀ ಶಾರದಾಂಬಾ ಮಹಾರಥೋತ್ಸವ, ಶ್ರೀ ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ ಜರುಗಲಿದೆ.