ಶೃಂಗೇರಿ ಶ್ರೀ ಶಾರದಾಂಬಾ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಸಂಘದಿಂದ ಕಾರ್ಮಿಕರಿಗೆ ಸಂರಕ್ಷಣೆ ಹಾಗೂ ಸರ್ಕಾರದ ಸವಲತ್ತುಗಳ ಕುರಿತು ಏರ್ಪಡಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಕಾರ್ಮಿಕರು ಭಾಗವಹಿಸಿದ್ದರು. ಶಿವರಾಮ್, ಮಧು, ಪ್ರಸಾದ್, ಸುಬ್ರಹ್ಮಣ್ಯ ಇತರರಿದ್ದರು. 
ನ್ಯೂಸ್

ಕಾರ್ಮಿಕರಿಗೆ ಸೌಲಭ್ಯಗಳು ಅಗತ್ಯ

ಶೃಂಗೇರಿ: ಕರ್ನಾಟಕ ಕಟ್ಟಡ ಮತ್ತು ಇತರ ಕಾರ್ಮಿಕರ ಮಂಡಳಿ ಹಾಗೂ ಶೃಂಗೇರಿ ಶ್ರೀ ಶಾರದಾಂಬಾ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಸಂಘದಿಂದ ಕನ್ನಡಭವನದಲ್ಲಿ ಕಾರ್ಮಿಕರಿಗೆ ಸಂರಕ್ಷಣೆ ಹಾಗೂ ಸರ್ಕಾರದ ಸವಲತ್ತುಗಳ ಕುರಿತು ಸೋಮವಾರ ತರಬೇತಿ ಕಾರ್ಯಕ್ರಮ ನಡೆಯಿತು.
ತರಬೇತುದಾರ ಶ್ರೀಧರ್ ಮಾತನಾಡಿ, ಕಟ್ಟಡ ಕಾರ್ಮಿಕರು ಮಳೆ, ಚಳಿ, ಬಿಸಿಲನ್ನು ಲೆಕ್ಕಿಸದೆ ಜೀವನ ನಿರ್ವಹಣೆಗಾಗಿ ಪ್ರಾಮಾಣಿಕವಾಗಿ ದುಡಿಯುವರು. ಸರ್ಕಾರ ಕಾರ್ಮಿಕರಿಗೆ ಹಲವು ಯೋಜನೆಗಳನ್ನು ರೂಪಿಸಿದೆ. ಮಕ್ಕಳ ಶಿಕ್ಷಣ, ಕುಟುಂಬದ ಆರೋಗ್ಯ ರಕ್ಷಣೆ, ಶುಭಸಮಾರಂಭಕ್ಕೆ ಸಹಾಯಧನ ಇತ್ಯಾದಿ ಸವಲತ್ತುಗಳಿವೆ. ಕಾರ್ಮಿಕರಿಗೆ ಸರ್ಕಾರದ ಯೋಜನೆಗಳ ಕುರಿತು ಅರಿವು ಇರಬೇಕು. ಸಾಕಷ್ಟು ಯೋಜನೆಗಳಿದ್ದು ಕಾರ್ಮಿಕರು ಇಲಾಖೆಯಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು ಎಂದರು. 150ಕ್ಕೂ ಹೆಚ್ಚು ಕಾರ್ಮಿಕರು ತರಬೇತಿ ಪಡೆದರು. ತಾಲೂಕು ಸಂಘದ ಅಧ್ಯಕ್ಷ ಮುನಿಸ್ವಾಮಿ, ಉಪಾಧ್ಯಕ್ಷ ನೂರ್ ಅಹಮದ್, ಕಾರ್ಯದರ್ಶಿ ಶಿವರಾಮ್, ಮಾಜಿ ಅಧ್ಯಕ್ಷ ಚಂದ್ರನಾಯ್ಕ ಇದ್ದರು.