ಮುಂಡರಗಿ: ತಾಲೂಕಿನ ಮಕ್ತುಂಪೂರ ಗ್ರಾಮದ ಶ್ರೀ ಮಾರುತೇಶ್ವರನ 18ನೇ ವರ್ಷದ ಕಾರ್ತಿಕೋತ್ಸವವು ನ. 23ರಂದು ಜರುಗಲಿದೆ.
ನ. 23ರಂದು ಬೆಳಗ್ಗೆ 6 ಗಂಟೆಗೆ ಕುಂಕುಮಪೂಜೆ ನಡೆಯುವುದು. 8 ಗಂಟೆಗೆ ಮಾರುತೇಶ್ವರ ಉತ್ಸವ ಮೂರ್ತಿ ಹೊಳೆಗೆ ಹೋಗುವ ಕಾರ್ಯಕ್ರಮವಿದ್ದು, ಬಳಿಕ ಸಕಲ ವಾದ್ಯ ಮೇಳದೊಂದಿಗೆ ಶ್ರೀ ಮಾರುತೇಶ್ವರ ಉತ್ಸವ ಮೂರ್ತಿ ಮೆರವಣಿಗೆ ನಡೆಯಲಿದೆ. ಸಂಜೆ 6.30 ಗಂಟೆಗೆ ಪಲ್ಲಕ್ಕಿ ಉತ್ಸವ ನಡೆಯುವುದು. ಸಂಜೆ 7.15ಕ್ಕೆ ನಾಡೋಜ ಡಾ. ಅನ್ನದಾನೀಶ್ವರ ಶಿವಯೋಗಿಗಳ ಸಾನ್ನಿಧ್ಯದಲ್ಲಿ ಕಾರ್ತಿಕೋತ್ಸವ ನಡೆಯಲಿದ್ದು, 9 ಗಂಟೆಗೆ ಅನ್ನ ಸಂತರ್ಪಣೆ ನೆರವೇರಲಿದೆ.
ಶ್ರೀ ಮಾರುತೇಶ್ವರ ವಿವಿಧೋದ್ದೇಶಗಳ ಸೇವಾ ಸಂಸ್ಥೆ ನೇತೃತ್ವದಲ್ಲಿ ಜೆ.ಪಿ. ಲ್ಯಾಂಪ್ ಯ್ಯುಟೂಬ್ ಚಾನಲ್ ಅವರಿಂದ ಸಾಂಸ್ಕೃತಿಕ ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.