ನ್ಯೂಸ್

ಕಾವ್ಯಾ ಮಾರನ್​ನನ್ನು ಹಾಗೆ ನೋಡಿ ನನಗೆ ಬೇಸರವಾಯಿತು; ಸೂಪರ್​ಸ್ಟಾರ್​ ರಜನಿ ಹೀಗೆ ಹೇಳಿದ್ಯಾಕೆ

ಚೆನ್ನೈ: ಇಂಡಿಯನ್​ ಪ್ರೀಮಿಯರ್​ ಲೀಗ್​ನ ಪ್ರಸಿದ್ಧ ಫ್ರಾಂಚೈಸಿ ಸನ್​ರೈಸರ್ಸ್​ ಹೈದರಾಬಾದ್​ ತಂಡವು ಬರುವ ಆವೃತ್ತಿಯಲ್ಲಿ ಉತ್ತಮ ಆಟಗಾರರನ್ನು ಖರೀದಿಸಬೇಕು ಎಂದು ಸೂಪರ್​​ಸ್ಟಾರ್​ ರಜನಿಕಾಂತ್​ ಅಭಿಪ್ರಾಯಪಟ್ಟಿದ್ದಾರೆ.

ಜೈಲರ್​ ಚಿತ್ರದ ಆಡಿಯೋ ಲಾಂಚ್​ನಲ್ಲಿ ಈ ಕುರಿತು ಮಾತನಾಡಿದ ರಜಿನಿಕಾಂತ್​ ಈ ಕುರಿತು ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ತಲೈವಾ ಸನ್​ರೈಸರ್ಸ್​ ಹೈದರಾಬಾದ್​ ತಂಡದ ಮಾಲಕಿ ಕಾವ್ಯಾ ಮಾರನ್​ ಪ್ರತಿ ಪಂದ್ಯದಲ್ಲು ಅವರ ತಂಡವನ್ನು ಹುರಿದುಂಬಿಸುತ್ತಾರೆ. ತಂಡ ಗೆದ್ದಾಗಲು ಸೋತಾಗಲು ಅವರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತದೆ.

ಕಳೆದೆ ಕೆಲ ಆವೃತ್ತಿಗಳಲ್ಲಿ SRH ತಂಡವು ಗೆಲುವಿಗಿಂತ ಹೆಚ್ಚಾಗಿ ಸೋಲನ್ನು ಕಂಡಿದೆ. ಕಾವ್ಯಾ ಮಾರನ್​ ಅವರು ದುಃಖಪಡುವುದನ್ನು ಮಾತ್ರ ನೋಡಲು ಆಗುವುದಿಲ್ಲ. ಬರುವ ಆವೃತ್ತಿಯಲ್ಲಿ ಉತ್ತಮ ಆಟಗಾರರನ್ನು ಖರೀದಿಸಬೇಕು ಎಂದು ಸೂಪರ್​​ಸ್ಟಾರ್​ ರಜನಿಕಾಂತ್ ಸಲಹೆ ನೀಡಿದ್ದಾರೆ.