ನ್ಯೂಸ್

ಪಾಕ್​ ಪರ ಬೇಹುಗಾರಿಕೆ: ಗುಜರಾತ್​ ಮೂಲದ ವ್ಯಕ್ತಿ ಬಂಧನ | Spying for Pakistan

Spying for Pakistan: ಭಾರತೀಯ ವಾಯುಪಡೆ(IAF) ಮತ್ತು ಗಡಿ ಭದ್ರತಾ ಪಡೆ(BSF)ಗೆ ಸಂಬಂಧಿಸಿದಂತೆ ಪ್ರಮುಖ ಮಾಹಿತಿಯನ್ನು ಪಾಕಿಸ್ತಾನ ಏಜೆಂಟ್​ ಜತೆ ಹಂಚಿಕೊಂಡ ಆರೋಪದ ಮೇಲೆ ಗುಜರಾತ್​ನ ಕಛ್​ ಮೂಲದ ವ್ಯಕ್ತಿಯನ್ನು ಶನಿವಾರ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿ ಸಹದೇವ್ ಸಿಂಗ್ ಗೋಹಿಲ್ ಬಂಧಿಸಲಾಗಿದೆ. ಇತ ಆರೋಗ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದಾನೆ ಎಂದು ಗುಜರಾತ್ ಭಯೋತ್ಪಾದನಾ ನಿಗ್ರಹ ದಳದ (ಎಟಿಎಸ್) ಹಿರಿಯ ಅಧಿಕಾರಿ ಕೆ. ಸಿದ್ಧಾರ್ಥ್ ತಿಳಿಸಿದ್ದಾರೆ.

2023 ರಲ್ಲಿ 28 ವರ್ಷದ ಮಹಿಳೆ ವಾಟ್ಸಾಪ್ ಮೂಲಕ ತನ್ನನ್ನು ತಾನು ಆದಿತಿ ಭಾರದ್ವಾಜ್ ಎಂದು ಗುರುತಿಸಿಕೊಂಡ ಇತನ ಸಂಪರ್ಕಕ್ಕೆ ಬಂದಿದ್ದಳು. ಆಕೆಗೆ ಹೊಸದಾಗಿ ನಿರ್ಮಿಸಲಾಗುತ್ತಿರುವ ಅಥವಾ ನಿರ್ಮಾಣ ಹಂತದಲ್ಲಿರುವ ಐಇಎಫ್ ಮತ್ತು ಬಿಎಸ್‌ಎಫ್ ತಾಣಗಳ ಫೋಟೋಗಳು ಮತ್ತು ವೀಡಿಯೊಗಳನ್ನು ಕಳುಹಿಸಿದ್ದ ಎಂದು ಸಿದ್ಧಾರ್ಥ್ ಹೇಳಿದ್ದಳು. ಅದರಂತೆ ಇತ ಹಂಚಿಕೊಂಡಿದ್ದು, ಬಿಎಸ್‌ಎಫ್ ಮತ್ತು ಐಎಎಫ್‌ಗೆ ಸಂಬಂಧಿಸಿದ ಮಾಹಿತಿ ಪಾಕಿಸ್ತಾನಿ ಏಜೆಂಟ್‌ನೊಂದಿಗೆ ಹಂಚಿಕೊಳ್ಳಲಾಗಿದೆ ಎಂಬ ಮಾಹಿತಿ ನಮಗೆ ಸಿಕ್ಕಿದೆ ಎಂದು ಅಧಿಕಾರಿ ಹೇಳಿದರು.

ಮೇ 1 ರಂದು ಪ್ರಾಥಮಿಕ ತನಿಖೆಗಾಗಿ ಗೋಹಿಲ್ ಅವರನ್ನು ಕರೆಸಲಾಯಿತು, ಈ ತನಿಖೆಯ ಸಮಯದಲ್ಲಿ ಪಾಕಿಸ್ತಾನಿ ಏಜೆಂಟ್ ಐಇಎಫ್ ಮತ್ತು ಬಿಎಸ್ಎಫ್ಎಫ್ ತಾಣಗಳ ಫೋಟೋಗಳು ಮತ್ತು ವೀಡಿಯೊಗಳನ್ನು ಕೇಳಿದ್ದಾರೆ ಎಂದು ಭಯೋತ್ಪಾದನಾ ನಿಗ್ರಹ ದಳ(ಎಸ್‌ಟಿಎಫ್) ಕಂಡುಕೊಂಡಿದೆ. ಅಲ್ಲದೆ, ಮುಂದಿನ ತನಿಖೆ ನಡೆಸತ್ತೀವೆ ಎಂದು ಅಧಿಕಾರಿ ಹೇಳಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.(ಏಜೆನ್ಸೀಸ್​)