ಸೊರಬದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಕ್ರೀಡಾಕೂಟವನ್ನು ಬಿಇಒ ಆರ್.ಪುಷ್ಪಾ ಉದ್ಘಾಟಿಸಿದರು. ದಿವಾಕರ ಬಾವೆ, ಸಂದೀಪ್, ಸಿ.ಆರ್.ಸಿಂಗರಾಜ್ ಒಡೆಯರ್, ದಯಾನಂದ ಇತರರಿದ್ದರು. 
ನ್ಯೂಸ್

ಶೈಕ್ಷಣಿಕ ಪ್ರಗತಿಗೆ ಕ್ರೀಡೆ ಪೂರಕ

ಸೊರಬ: ವಿದ್ಯಾರ್ಥಿಗಳ ಶೈಕ್ಷಣಿಕ ಪಗ್ರತಿಯಲ್ಲಿ ಕ್ರೀಡೆಗಳೂ ಪೂರಕ ಎಂದು ಬಿಇಒ ಆರ್.ಪುಷ್ಪಾ ಹೇಳಿದರು. ಪಟ್ಟಣದಲ್ಲಿ ಶಿಕ್ಷಣ ಇಲಾಖೆ ಹಾಗೂ ಶ್ರೀ ಸ್ವಾಮಿ ವಿವೇಕಾನಂದ ಬೋಧನಾ ಸಂಸ್ಥೆಯಿಂದ ಆಯೋಜಿಸಿದ್ದ 17 ವರ್ಷದೊಳಗಿನ ಪ್ರೌಢಶಾಲೆಗಳ ತಾಲೂಕು ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು. ಮಕ್ಕಳ ದೈಹಿಕ, ಮಾನಸಿಕ ಬೆಳವಣಿಗೆಗೆ ಕ್ರೀಡೆಗಳು ಸಹಕಾರಿ. ಸದೃಢತೆ ಹೊಂದಿದ ಮಕ್ಕಳು ಶೈಕ್ಷಣಿಕ ಪ್ರಗತಿಯಲ್ಲಿ ಮುಂಚೂಣಿಯಲ್ಲಿ ಇರುತ್ತಾರೆ. ಹೀಗಾಗಿ ಸೋಲು-ಗೆಲುವು ಲೆಕ್ಕಿಸದೆ ಕ್ರೀಡಾಕೂಟದಲ್ಲಿ ಭಾಗವಹಿಸಬೇಕು ಎಂದರು. ಬೋಧನಾ ಸಂಸ್ಥೆ ಅಧ್ಯಕ್ಷ ದಿವಾಕರ ಬಾವೆ, ದೈಹಿಕ ಶಿಕ್ಷಣ ಪರಿವೀಕ್ಷಕ ಸಿ.ಆರ್.ಸಿಂಗರಾಜ್ ಒಡೆಯರ್, ಕ್ಷೇತ್ರ ಸಮನ್ವಯ ಅಧಿಕಾರಿ ದಯಾನಂದ ಕಲ್ಲೆರ್, ಹಳೇ ಸೊರಬ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಬಿ.ಓಂಕಾರಪ್ಪ, ಮುಖ್ಯ ಶಿಕ್ಷಕ ಸಂದೀಪ್, ಪ್ರಮುಖರಾದ ರಘುಪತಿ, ಉಮೇಶ್ ರಾಥೋಡ್, ಸಿ.ಆರ್.ಲಮಾಣಿ, ಸಂಜೀವ್, ಧರ್ಮಪ್ಪ, ಮಂಜಪ್ಪ, ಸುಧಾ, ಸವಿತಾ ಇದ್ದರು.