ಗಾಣಿಗರ ಕ್ರೀಡಾಕೂಟದ ಉದ್ಘಾಟನಾ ಕಾರ್ಯಕ್ರಮದಲ್ಲಿ ಶ್ರೀಲಕ್ಷ್ಮೀ ಗಾಣಿಗ ಅವರನ್ನು ಸನ್ಮಾನಿಸಲಾಯಿತು. ರಾಜೇಶ್ ಬಂಗೇರ, ಸೇಸಪ್ಪ ಸಾಲ್ಯಾನ್, ಉದ್ಯಮಿ ರವಿ ಪೂಜಾರಿ ಇದ್ದರು.
- ವಿಜೇತ ತಂಡಗಳಿಗೆ ಬಹುಮಾನ ವಿತರಣೆ
- ಜಿಲ್ಲಾಮಟ್ಟದ ಪುರುಷರ ವಾಲಿಬಾಲ್, ಮಹಿಳೆಯರ ತ್ರೋಬಾಲ್ ಹಾಗೂ ಶಟ್ಲ್ ಪಂದ್ಯಾಟ
ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ಯುವ ಪೀಳಿಗೆಯನ್ನು ಸಂಘಟನೆಯತ್ತ ಆಕರ್ಷಿಸಲು ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಮುಖ ಪಾತ್ರ ವಹಿಸುತ್ತವೆ. ಇಂತಹ ಚಟುವಟಿಕೆಗಳ ಮೂಲಕ ಸಂಘಟನೆಯನ್ನು ಬಲಪಡಿಸಲು ಸಾಧ್ಯ ಎಂದು ಉದ್ಯಮಿ ಶಂಕರ ಎ.ಕೋಟ್ಯಾನ್ ಹೇಳಿದರು.
ಸಪಲಿಗರ ಯಾನೆ ಗಾಣಿಗರ ಸೇವಾ ಸಂಘ, ಗಾಣಿಗರ ಯುವ ವೇದಿಕೆ ಹಾಗೂ ಗಾಣಿಗರ ಮಹಿಳಾ ವೇದಿಕೆ ಮೂಡುಬಿದಿರೆ ವತಿಯಿಂದ ಶ್ರೀ ಧವಳಾ ಕಾಲೇಜು ಕ್ರೀಡಾಂಗಣದಲ್ಲಿ ಭಾನುವಾರ ಜಿಲ್ಲಾಮಟ್ಟದ ಪುರುಷರ ವಾಲಿಬಾಲ್, ಮಹಿಳೆಯರ ತ್ರೋಬಾಲ್ ಹಾಗೂ ಶಟ್ಲ್ ಪಂದ್ಯಾಟ ಉದ್ಘಾಟಿಸಿ ಮಾತನಾಡಿದರು.
ಗಾಣಿಗ ಯಾನೆ ಸಪಲಿಗರ ಸೇವಾ ಸಂಘ ಅಧ್ಯಕ್ಷ ರಾಜೇಶ್ ಬಂಗೇರ ಅಧ್ಯಕ್ಷತೆ ವಹಿಸಿದ್ದರು. ಬಂಗ್ರಮಂಜೇಶ್ವರ ಶಾಸ್ತಾವೇಶ್ವರ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಸೇಸಪ್ಪ ಸಾಲ್ಯಾನ್, ಉದ್ಯಮಿ ರವಿ ಪೂಜಾರಿ, ಅಶೋಕ್ ಸಪಳಿಗ, ಸಂಘದ ಗೌರವಾಧ್ಯಕ್ಷ ಡಾ.ಸತ್ಯಶಂಕರ್ ಪುತ್ರನ್, ಪ್ರಾಯೋಜಕ ಮುರಳೀದಾಸ್ ಕಾವೂರು, ಮಹಿಳಾ ವೇದಿಕೆ ಅಧ್ಯಕ್ಷೆ ಸುಜಯ ಬಂಗೇರ, ಪ್ರಮುಖರಾದ ಪ್ರತಾಪ್ ಬೆಟ್ಟೇರಿ, ನತೇಶ್ ಬಾರಾಡಿ, ಸುಕೇಶ್ ಬಾರಾಡಿ, ನವೀನ್ ಪುತ್ರನ್, ಸತೀಶ್ ಬಾರಾಡಿ, ಸಾರಿಕಾ ಬಂಗೇರ, ಸುಶ್ಮಿತಾ ರಂಜಿತ್ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.
ಅಂತಾರಾಷ್ಟ್ರೀಯ ಈಜುಪಟು ಶ್ರೀಲಕ್ಷ್ಮೀ ಗಾಣಿಗ ವಿಟ್ಲ ಅವರನ್ನು ಸನ್ಮಾನಿಸಲಾಯಿತು. ದಿಯಾ ಬಂಗೇರ ಸನ್ಮಾನಪತ್ರ ವಾಚಿಸಿದರು. ರೂಪಾ ಪ್ರದೀಪ್ ಕೋಟೆಬಾಗಿಲು ನಿರೂಪಿಸಿದರು.
ಗಮನ ಸೆಳೆದ ಪಂದ್ಯಾಟ
ಪುರುಷರ ವಾಲಿಬಾಲ್ ಪಂದ್ಯಾಟದಲ್ಲಿ ತಂಡಗಳು ತೀವ್ರ ಪೈಪೋಟಿ ನಡೆಸಿ ಪ್ರೇಕ್ಷಕರ ಗಮನ ಸೆಳೆದವು. ಮಹಿಳೆಯರ ತ್ರೋಬಾಲ್ ಪಂದ್ಯಾಟವೂ ಜರುಗಿತು. ಶಟ್ಲ್ ಪಂದ್ಯಾಟದಲ್ಲಿ 15 ವರ್ಷದೊಳಗಿನ ಬಾಲಕ-ಬಾಲಕಿಯರು ಹಾಗೂ 30 ವರ್ಷ ಮೇಲ್ಪಟ್ಟವರ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆದವು. ವಿಜೇತ ತಂಡಗಳು ಮತ್ತು ಆಟಗಾರರಿಗೆ ನಗದು ಬಹುಮಾನ ಹಾಗೂ ಟ್ರೋಫಿ ನೀಡಿ ಗೌರವಿಸಲಾಯಿತು.