ನ್ಯೂಸ್

ಹುಣಸೂರು ರೋಟರಿ ಕ್ಲಬ್ ಪಾರಮ್ಯ

ಎ. ಆರ್. ರಘುರಾಮ

ಹುಣಸೂರು: ರೋಟರಿ ವಲಯ ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಆತಿಥೇಯ ಹುಣಸೂರು ರೋಟರಿ ಕ್ಲಬ್ ತಂಡ 10 ವಿಭಾಗಗಳಲ್ಲಿ ಗೆಲುವು ಸಾಧಿಸುವ ಮೂಲಕ ಚಾಂಪಿಯನ್ ತಂಡವಾಗಿ ಹೊರಹೊಮ್ಮಿತು. ನಗರದ ರಾಮಯ್ಯ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ಭಾನುವಾರ ಆಯೋಜನೆಗೊಂಡಿದ್ದ ಪಂದ್ಯಾವಳಿಯ 30-45 ವಯೋಮಾನದ ಪುರುಷರ ಡಬಲ್ಸ್ ವಿಭಾಗದಲ್ಲಿ ಹುಣಸೂರು ತಂಡ ಪ್ರಥಮ, ಪಿರಿಯಾಪಟ್ಟಣದ ಐಕಾನ್ ಕ್ಲಬ್ ದ್ವಿತೀಯ ಸ್ಥಾನವನ್ನು ತನ್ನದಾಗಿಸಿಕೊಂಡಿತು.
60 ವರ್ಷ ಮೇಲ್ಪಟ್ಟ ಪುರುಷರ ಡಬಲ್ಸ್ ವಿಭಾಗದಲ್ಲಿ ಪ್ರಥಮ ಸ್ಥಾನ ಹುಣಸೂರು ಕ್ಲಬ್ ಹಾಗೂ ದ್ವಿತೀಯ ಸ್ಥಾನವನ್ನು ಪಿರಿಯಾಪಟ್ಟಣ ಮಿಡ್ ಟೌನ್ ಕ್ಲಬ್ ಪಡೆದವು. 45 ರಿಂದ 60ನೇ ವಯಸ್ಸಿನ ಪುರುಷರ ಡಬಲ್ಸ್ ವಿಭಾಗದಲ್ಲಿ ಪಿರಿಯಾಪಟ್ಟಣ ಐಕಾನ್ (ಪ್ರ) ಹಾಗೂ ಹುಣಸೂರು ರೋಟರಿ ಕ್ಲಬ್ (ದ್ವಿ) ಸ್ಥಾನ ಗಳಿಸಿತು.
ಪುರುಷರ ಸಿಂಗಲ್ಸ್‌ನಲ್ಲಿ 30-45 ವಯೋಮಿತಿ ವಿಭಾಗದಲ್ಲಿ ಹುಣಸೂರು ರೋಟರಿ (ಪ್ರ),ಕುಶಾಲನಗರ ಕ್ಲಬ್ (ದ್ವಿ), 45-60 ವಯೋಮಿತಿ ವಿಭಾಗದಲ್ಲಿ ಎರಡು ಸ್ಥಾನಗಳಲ್ಲಿ ಹುಣಸೂರು ರೋಟರಿ ಕ್ಲಬ್ ಮತ್ತು 60 ವರ್ಷ ಮೇಲ್ಪಟ್ಟ ವಿಭಾಗದಲ್ಲಿ ಪಿರಿಯಾಪಟ್ಟಣ ಮಿಡ್ ಟೌನ್ (ಪ್ರ) ಹಾಗೂ ಹುಣಸೂರು ರೋಟರಿ ಕ್ಲಬ್ (ದ್ವಿ) ಸ್ಥಾನ ಪಡೆದುಕೊಂಡವು.ಮಹಿಳೆಯರ ಡಬಲ್ಸ್ ನಲ್ಲಿ 45 ವರ್ಷದ ಒಳಗಿನ ವಿಭಾಗದಲ್ಲಿ ಕುಶಾಲನಗರ (ಪ್ರ) ಮತ್ತುಹುಣಸೂರು (ದ್ವಿ). ಇದೇ ವಯೋಮಾನದ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಹುಣಸೂರು (ಪ್ರ) ಮತ್ತು ಕುಶಾಲನಗರ ಕ್ಲಬ್ (ದ್ವಿ) ಸ್ಥಾನ ಗಳಿಸಿದವು. ಮಿಕ್ಸೆಡ್ ಡಬಲ್ಸ್‌ನಲ್ಲಿ ಹುಣಸೂರು (ಪ್ರ) ಹಾಗೂ ಕುಶಾಲನಗರ ಕ್ಲಬ್ (ದ್ವಿ) ಸ್ಥಾನ ಪಡೆದುಕೊಂಡವು.ಪಂದ್ಯಾವಳಿಯನ್ನು ವಲಯ 6 ರ ಸಹಾಯಕ ಪ್ರಾಂತಪಾಲ ಸತ್ಯನಾರಾಯಣ ಉದ್ಘಾಟಿಸಿದರು. ಹುಣಸೂರು ರೋಟರಿ ಕ್ಲಬ್ ಅಧ್ಯಕ್ಷ ಚನ್ನಕೇಶವ, ಪಿರಿಯಾಪಟ್ಟಣ ಕ್ಲಬ್ ಅಧ್ಯಕ್ಷ ಜವರೇಗೌಡ,
ಪದಾಧಿಕಾರಿಗಳಾದ ಬಸವರಾಜು, ಪ್ರಸನ್ನ, ಆನಂದ್, ಸಿದ್ದೇಶ್ವರ, ಡಾ. ರಘು ಮತ್ತು ಎಚ್. ಆರ್.ಕೃಷ್ಣಕುಮಾರ್ ಹಾಜರಿದ್ದರು.