ನ್ಯೂಸ್

ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆ

ಎ. ಆರ್. ರಘುರಾಮ

ಬೆಟ್ಟದಪುರ: ಬೆಟ್ಟದಪುರದ ಎಸ್‌ಎಂಎಸ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಪಿಯು ಕಾಲೇಜುಗಳ ಜಿಲ್ಲಾಮಟ್ಟದಲ್ಲಿ ಕ್ರೀಡಾಕೂಟದ ವಿವಿಧ ಸ್ಪರ್ಧೆಗಳಲ್ಲಿ ಜಯಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕರಾಟೆಯಲ್ಲಿ ತರುಣ್ ಪ್ರಥಮ, ಯುವಕರ ಟೆನಿಕಾಯ್ಟ್ನಲ್ಲಿ ಎಂ.ಕೆ ತೇಜು ದ್ವಿತೀಯ, ಯುವತಿಯರ ಟೆನಿಕಾಯ್ಟ್ನಲ್ಲಿ ಸಿ.ಅನುಷಾ ದ್ವಿತೀಯ ಸ್ಥಾನ ಗಳಿಸಿದ್ದಾರೆ.
ವಾಲಿಬಾಲ್ ತಂಡದಲ್ಲಿ ನಿಖಿಲ್, ಐಶ್ವರ್ಯಾ, ಥ್ರೋಬಾಲ್ ತಂಡದಲ್ಲಿ ಎಂ.ಕೆ. ತೇಜು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಸಾಧಕ ವಿದ್ಯಾರ್ಥಿ ತಂಡವನ್ನು ಬುಧವಾರ ಕಾಲೇಜಿನಲ್ಲಿ ಅಭಿನಂದನೆ ಸಲ್ಲಿಸಲಾಯಿತು. ವಿದ್ಯಾಸಂಸ್ಥೆ ಸಂಸ್ಥಾಪಕ ಬಿ.ವಿ. ಮಂಜುನಾಥ, ಕಾರ್ಯದರ್ಶಿ ಎ.ವಿ. ಛಾಯಾ, ಪ್ರಾಂಶುಪಾಲ ರಾಜು, ಕ್ರೀಡಾ ಕಾರ್ಯದರ್ಶಿ ಶಿವಕುಮಾರ್, ಸತೀಶ್, ಉಪನ್ಯಾಸಕರಾದ ಕುಬೇರ, ವಸಂತ್, ಯಶವಂತ್ ಬಸವರಾಜು, ಹರ್ಷಿತಾ ಇತರರು ಇದ್ದರು.