ನ್ಯೂಸ್

ಮುಂಬೈನಲ್ಲಿ ಸ್ಪೈಡರ್ ಮ್ಯಾನ್ ಪ್ರತ್ಯಕ್ಷ ; ಆತ ಮಾಡಿದ್ದನ್ನು ನೋಡಿದ್ರೆ ನೀವೂ ನಗೋದು ಗ್ಯಾರಂಟಿ ! | Spider Man In mumbai

Spider Man In mumbai: ಮುಂಬೈನಲ್ಲಿ ನಿರಂತರ ಮಳೆಯಿಂದಾಗಿ ಅನೇಕ ರಸ್ತೆಗಳು ಜಲಾವೃತವಾಗಿವೆ. ಮುಂಬೈ ನಗರದ ರಸ್ತೆಯಲ್ಲಿನ ನೀರನ್ನು ಸ್ಪೈಡರ್ ಮ್ಯಾನ್ ವೇಷ ಧರಿಸಿದ ವ್ಯಕ್ತಿಯೊಬ್ಬ ಮಾಪ್‌ನೊಂದಿಗೆ ತೆರವುಗೊಳಿಸಲು ಪ್ರಯತ್ನಿಸುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಕತ್​ ವೈರಲ್​​ ಆಗಿದೆ.

ಈ ವಿಡಿಯೋದಲ್ಲಿ, ನಗರದಲ್ಲಿ ಭಾರೀ ಮಳೆಯ ಸಮಯದಲ್ಲಿ ನೀರು ತುಂಬಿದ ಬೀದಿಗಳನ್ನು ತೆರವುಗೊಳಿಸಲು ಸ್ಪೈಡರ್ ಮ್ಯಾನ್ ವೇಷಭೂಷಣದಲ್ಲಿರುವ ವ್ಯಕ್ತಿ ಪ್ರಯತ್ನಿಸುತ್ತಿರುವುದನ್ನು ನಾವು ನೋಡಬಹುದು. ಇದರಿಂದ ಪ್ರೇರಪಿತರಾಗಿರುವ ಸಾಮಾಜಿಕ ಜಾಲತಾಣ ಬಳಕೆದಾರರು ಸೂಪರ್ ಹೀರೋನ ಹೊಸ ಪಾತ್ರದ ಬಗ್ಗೆ ಮೀಮ್ಸ್ ಮತ್ತು ಜೋಕ್‌ಗಳನ್ನು ಪೋಸ್ಟ್​ ಮಾಡುತ್ತಿದ್ದಾರೆ.

ವಿಡಿಯೋದಲ್ಲೇನಿದೆ..?

ಇದಕ್ಕೆ ಒಬ್ಬ ಬಳಕೆದಾರ ನಿಜವಾದ ಸ್ಪೈಡರ್‌ಮ್ಯಾನ್ ಆಫ್ ಮುಂಬೈ ಎಂದು ಬರೆದರೆ, ಇನ್ನೊಬ್ಬರು ಸ್ಪೈಡರ್‌ಮ್ಯಾನ್ ಮನೆಯಿಂದ ದೂರ ಎಂದಿದ್ದಾರೆ. ಇನ್ನೊಬ್ಬ ಬಳಕೆದಾರ ನೀವು ಬಕೆಟ್ ತೆಗೆದುಕೊಂಡು ಹೋಗಿದ್ದರೆ ಚೆನ್ನಾಗಿರುತ್ತಿತ್ತು ಎಂದಿದ್ದಾನೆ. ಮುಂಬೈ ಜನರ ಮುಖದಲ್ಲಿ, ಸ್ಪೈಡರ್ ಮ್ಯಾನ್​ನ ಹೊಸ ಸಾಹಸ ಮಳೆಯ ತಾಪತ್ರಯದ ನಡುವೆ ಸ್ವಲ್ಪ ಖುಷಿ ತಂದಿದೆ.(ಏಜೆನ್ಸೀಸ್)