ನ್ಯೂಸ್

ವಿಮಾನ ಸಿಬ್ಬಂದಿ ಮೇಲೆ ಹಲ್ಲೆ ಆರೋಪ: 5 ವರ್ಷ ಫ್ಲೈಟ್​ ಹತ್ತದಂತೆ ಭಾರತೀಯ ಸೇನಾಧಿಕಾರಿಗೆ ನಿಷೇಧ ಹೇರಿದ ಸ್ಪೈಸ್​​ ಜೆಟ್!

ಇದೇ ವರ್ಷದ ಜು.26ರಂದು ಸ್ಪೈಸ್​​ ಜೆಟ್​ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ಭಾರತೀಯ ಸೇನಾದ ಹಿರಿಯ ಅಧಿಕಾರಿಯನ್ನು ಇದೀಗ 5 ವರ್ಷಗಳ ಕಾಲ ವಿಮಾನ ಹಾರಾಟ ನಿಷೇಧ ಪಟ್ಟಿಯಲ್ಲಿ ಇರಿಸಲಾಗಿದೆ ಎಂದು ಮಂಗಳವಾರ(ಆ.26) ವರದಿಯಾಗಿದೆ.

ವಿಮಾನಯಾನ ಸಿಬ್ಬಂದಿಗೆ ಹೊಡೆದ ಪ್ರಯಾಣಿಕನ್ನು ಅಶಿಸ್ತಿನ ವ್ಯಕ್ತಿ ಎಂದು ಪರಿಗಣಿಸಲಾಗಿದೆ. ಆತನ್ನನ್ನು ವಿಮಾನಯಾನ ಸಂಸ್ಥೆಯ ನಿಷೇಧಿತರ ಪಟ್ಟಿಯಲ್ಲಿ ಸೇರಿಸಲು ನಿರ್ಧರಿಸಲಾಗಿದೆ. ನಿಷೇಧಿತ ವ್ಯಕ್ತಿ 5 ವರ್ಷಗಳ ಕಾಲ ಸ್ಪೈಸ್​​ ಜೆಟ್​ನ ಯಾವುದೇ ದೇಶಿಯ ಮತ್ತು ಅಂತರಾಷ್ಟ್ರೀಯ ವಿಮಾನಗಳಲ್ಲಿ ಹಾರಾಟ ಮಾಡಲು ಸಾಧ್ಯವಾಗಲ್ಲ ಎಂದು ವರದಿ ಉಲ್ಲೇಖಿಸಿದೆ.

ನಾಗರಿಕ ವಿಮಾನಯಾನ ನಿಯಮಗಳ(CAR) ಅಡಿಯಲ್ಲಿ ರಚಿಸಲಾದ ಸಮಿತಿಯು ಈ ನಿರ್ಧಾರ ತೆಗೆದುಕೊಂಡಿದ್ದು, ಪ್ರಯಾಣಿಕರ ಮೇಲೆ ನಿಷೇಧ ಹೇರಲು ಶಿಫಾರಸ್ಸು ಮಾಡಿದೆ.

ಆ.5 ರಂದು ರಾಜ್ಯಸಭೆಯಲ್ಲಿ ಮಂಡಿಸಲಾದ ಮಾಹಿತಿಯ ಪ್ರಕಾರ, ಕಳೆದ ಐದು ವರ್ಷಗಳಲ್ಲಿ ಭಾರತವು 379 ಪ್ರಯಾಣಿಕರನ್ನು 'ನಿಷೇಧಿತ ಪಟ್ಟಿಯಲ್ಲಿ' ಇರಿಸಿದೆ, ಇದರಲ್ಲಿ ಈ ವರ್ಷ ಜುಲೈ 30 ರವರೆಗೆ 48 ಜನರನ್ನು ಪಟ್ಟಿಗೆ ಸೇರಿಸಲಾಗಿದೆ.

ಅಂದು ನೆಡದ ಘಟನೆ ಏನು?

ಶ್ರೀನಗರದಿಂದ ದೆಹಲಿಗೆ ಹೋಗುವ SG 386 ವಿಮಾನದ ಬೋರ್ಡಿಂಗ್ ಗೇಟ್‌ನಲ್ಲಿ ಜುಲೈ 26 ರಂದು ಈ ಘಟನೆ ಸಂಭವಿಸಿದೆ, ಬೋರ್ಡಿಂಗ್ ಸಮಯದಲ್ಲಿ ಹೆಚ್ಚುವರಿ ಲಗೇಜ್ ಶುಲ್ಕವನ್ನು ಪಾವತಿಸುವ ಬಗ್ಗೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಆ ಸಮಯದಲ್ಲಿ, ಆ ಅಧಿಕಾರಿ ಒಟ್ಟು 16 ಕೆಜಿ ತೂಕದ ಎರಡು ಕ್ಯಾಬಿನ್ ಬ್ಯಾಗ್‌ಗಳನ್ನು ಹೊತ್ತೊಯ್ದಿದ್ದರು ಎಂದು ವಿಮಾನಯಾನ ಸಂಸ್ಥೆ ಹೇಳಿಕೊಂಡಿದ್ದು, ಇದು ಅನುಮತಿಸಲಾದ ಮಿತಿಯಾದ 7 ಕೆಜಿಗಿಂತ ಎರಡು ಪಟ್ಟು ಹೆಚ್ಚು. ಈ ವೇಳೆ ಇಬ್ಬರ ನಡುವೆ ವಾಗ್ವಾದ ಉಂಟಾಗಿದ್ದು, ನಾಲ್ಕು ಸ್ಪೈಸ್​ ಜೆಟ್​ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ. ಈ ಕುರಿತು ವಿಡಿಯೊಂದು ವೈರಲ್​​ ಆಗಿತ್ತು.(ಏಜೆನ್ಸೀಸ್​)