ಕಡೂರು ತಾಲೂಕಿನ ಹರಳಘಟ್ಟ ಗ್ರಾಪಂ ಕಚೇರಿಯ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕ ಕೆ.ಎಸ್. ಆನಂದ್ ಭೂಮಿಪೂಜೆ ನೆರವೇರಿಸಿದರು. ಕಾಂತಮ್ಮ ಬಸವರಾಜ್, ಚಂದ್ರಪ್ಪ, ಲೋಲಾಕ್ಷಿಬಾಯಿ, ಸೋಮೇಶ್, ಶ್ರೀನಿವಾಸ್ ಮತ್ತಿತರಿದ್ದರು. 
ನ್ಯೂಸ್

ನರೇಗಾ ಕಾಮಗಾರಿಗೆ ಚುರುಕು ನೀಡಿ

ಕಡೂರು: ಹರಳಘಟ್ಟದಲ್ಲಿ ನರೇಗಾ ಯೋಜನೆಗಳ ಕಾಮಗಾರಿಗಳಿಗೆ ಚುರುಕು ನೀಡಿ ಪ್ರಗತಿ ಸಾಧಿಸಬೇಕಿದೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.
ತಾಲೂಕಿನ ಹರಳಘಟ್ಟ ಗ್ರಾಮದಲ್ಲಿ ಸೋಮವಾರ ಗ್ರಾಪಂ ಕಚೇರಿಯ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಪಂಚಾಯಿತಿಯಲ್ಲಿ ಜಾಗದ ಸಮಸ್ಯೆಯಿಂದಾಗಿ ತನ್ನ ಸ್ವಂತ ಕಚೇರಿಯನ್ನು ನಿರ್ಮಿಸಲು ಸಾಧ್ಯವಾಗಿಲ್ಲ. ಗ್ರಾಮದ ದಾನಿಗಳ ಜಾಗದ ನೆರವಿನಿಂದ 40 ಲಕ್ಷ ರೂ. ವೆಚ್ಚದಡಿ ಪಂಚಾಯಿತಿ ಕಚೇರಿ ನಿರ್ಮಾಣ ಕಾಮಗಾರಿಗೆ ಚಾಲನೆ ದೊರಕಿದೆ ಎಂದರು.
ಆರಂಭದಲ್ಲಿ ನರೇಗಾದಡಿಯಲ್ಲಿ 20 ಲಕ್ಷ ರೂ. ವೆಚ್ಚದ ಕಚೇರಿಯ ನಿರ್ಮಾಣ ಕಾರ್ಯ ಪ್ರಾರಂಭಗೊಳ್ಳಲಿದೆ. ಉಳಿದ 20 ಲಕ್ಷ ರೂ. ಪಂಚಾಯತ್ ರಾಜ್ ಇಲಾಖೆಯ ಅನುದಾನ ಮುಂದಿನ ದಿನಗಳಲ್ಲಿ ದೊರೆಯಲಿದೆ. ಹರಳಘಟ್ಟ ಗ್ರಾಪಂ ವಾಪ್ತಿಯಲ್ಲಿ ಸಾಕಷ್ಟು ಅಭಿವೃದ್ಧಿ ಯಾಗಬೇಕಿದೆ. ನರೇಗಾದಡಿ ಕಾಮಗಾರಿಗಳು ಪ್ರಗತಿಯಲ್ಲಿ ಹಿನ್ನಡೆಯಾಗಿದೆ. ಪ್ರಗತಿಗೆ ಪಂಚಾಯಿತಿ ಆಡಳಿತ ಮಂಡಳಿ ಒತ್ತು ನೀಡಬೇಕಿದೆ ಎಂದರು.
ತಾಪಂ ಮಾಜಿ ಅಧ್ಯಕ್ಷ ಎಸ್.ಕೆ.ಚಂದ್ರಪ್ಪ ಮಾತನಾಡಿ, ಪಂಚಾಯಿತಿ ಆಡಳಿತ ಮಂಡಳಿಯ ದೃಢ ನಿರ್ಧಾರದಿಂದ ಹಾಗೂ ಗ್ರಾಮದ ದಾನಿ ತಿಮ್ಮೇಗೌಡ ಅವರ ಸಹಕಾರದಿಂದ ನೂತನ ಕಟ್ಟಡ ಕಾಮಗಾರಿಗೆ ಚಾಲನೆ ದೊರಕಿದೆ. ಈ ಭಾಗದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಶಾಸಕರು ಸಹಕರಿಸಬೇಕಿದೆ ಎಂದು ಮನವಿ ಮಾಡಿದರು.
ಗ್ರಾಪಂ ಅಧ್ಯಕ್ಷೆ ಕಾಂತಮ್ಮ ಬಸವರಾಜ್, ಸದಸ್ಯರಾದ ಶ್ರೀನಿವಾಸ್, ಜಗದೀಶ್, ಆಶಾ, ಲಕ್ಷ್ಮಮ್ಮ, ಕವಿತಾ, ಪಿಡಿಒ ಜಯಂತಿ, ಜಿಪಂ ಮಾಜಿ ಸದಸ್ಯೆ ಲೋಲಾಕ್ಷಿಬಾಯಿ, ತಿಮ್ಮೇಗೌಡ, ಎಮ್ಮೆದೊಡ್ಡಿ ಸೋಮೇಶ್, ಚಿಕ್ಕಿಂಗಳ ಲಕ್ಷ್ಮಣ್, ಜಯಣ್ಣ, ಕಮಲನಾಯ್ಕ ಮತ್ತಿತರಿದ್ದರು.