ನ್ಯೂಸ್

ಹಿರಿಯ ನಟ ಧರ್ಮೇಂದ್ರ ಆರೋಗ್ಯದ ಬಗ್ಗೆ ಊಹಾಪೋಹ; ಅವರು ಗುಣಮುಖರಾಗುತ್ತಿದ್ದಾರೆ; ವದಂತಿ ತಳ್ಳಿ ಹಾಕಿದ ಸನ್ನಿ ಡಿಯೋಲ್| Actor Dharmendra

ಮುಂಬೈ: ಹಿಂದಿ ಚಿತ್ರ ರಂಗದ ಹಿರಿಯ ನಟ, ಸೂಪರ್​ ಸ್ಟಾರ್ ಧರ್ಮೇಂದ್ರ(Actor Dharmendra) ಅವರು ಆರೋಗ್ಯ ತಪಾಸಣೆಗೆ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದರೆ ಇಂದು(ನ. 10) ಅವರ  ಆರೋಗ್ಯದಲ್ಲಿ ಏರುಪೇರಾಗಿದ್ದು, ವೆಂಟಿಲೇಟರ್​ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಸಾಮಾಜಿಕ ಜಾಲತಾಣದಲ್ಲಿ ವದಂತಿಗೆ ಕಾರಣವಾಗಿ ಅಭಿಮಾನಿಗಳಲ್ಲಿ ಆತಂಕವನ್ನು ಮೂಡಿಸಿತ್ತು.

ಧರ್ಮೇಂದ್ರ ಅವರ ಆರೋಗ್ಯದ ಬಗ್ಗೆ ವದಂತಿ ಹಡುತ್ತಿದ್ದಂತೆ ಆಸ್ಪತ್ರೆಗೆ ಭೇಟಿ ನೀಡಿದ ಅವರ ಪುತ್ರ ನಟ ಸನ್ನಿ ಡಿಯೋಲ್ ಅವರನ್ನು ಭೇಟಿ ಮಾಡಿದ್ದಾರೆ. ಹಾಗೆಯೇ ಹಿರಿಯ ನಟಿ ಹೇಮಾ ಮಾಲಿನಿಯೂ ಆಸ್ಪತ್ರೆಗೆ ಭೇಟಿ ನೀಡಿ ಪರಾಮರ್ಶಿಸಿದ್ದಾರೆ.

ಧರ್ಮೇಂದ್ರ ಅವರು ವೆಂಟಿಲೇಟರ್​ನಲ್ಲಿದ್ದಾರೆ ಎಂಬ ವದಂತಿಯನ್ನು ನಿರಾಕರಿಸಿರುವ ಸನ್ನಿ ಡಿಯೋಲ್, ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಶೀಘ್ರದಲ್ಲಿ ಸಂಪೂರ್ಣ ಗುಣಮುಖರಾಗುತ್ತಾರೆ. ಯಾರು ಆತಂಕ ಪಡುವ ಆಗತ್ಯವಿಲ್ಲ ಎಂದು ಹೇಳಿದ್ದಾರೆ ಎಂದು ಟೈಮ್ಸ್​ ಆಫ್ ಇಂಡಿಯಾ ವರದಿ ಮಾಡಿದೆ.

ಡಿಸೆಂಬರ್ 8 ರಂದು ಸೂಪರ್‌ಸ್ಟಾರ್ ಅವರ 90 ನೇ ಹುಟ್ಟುಹಬ್ಬವಿದೆ. ಪೂರ್ವಭಾವಿಯಾಗಿ ನಿಯಮಿತವಾಗಿ ತಪಾಸಣೆಗಾಗಿ ಆಸ್ಪತ್ರೆಗೆ ಭೇಟಿ ನೀಡಿದ್ದರು. ಹೆಚ್ಚುವರಿ ಪರೀಕ್ಷೆಗಾಗಿ ಆಸ್ಪತ್ರೆಯಲ್ಲಿ ಉಳಿದುಕೊಂಡಿದ್ದಾರೆ. ಆತಂಕಕ್ಕೆ ಯಾವುದೇ ಕಾರಣ ಇಲ್ಲ ಎಂದು ಆಸ್ಪತ್ರೆ ಆಡಳಿತ ಮಂಡಳಿ ತಿಳಿಸಿದೆ.

ಧರ್ಮೇಂದ್ರ ಅವರು 2024ರಲ್ಲಿ ತೆರೆ ಕಂಡ ತೇರಿ ಬಾತೋ ಮೇ ಐಸಾ ಉಲ್ಜಾ ಜಿಯಾ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರದಲ್ಲಿ ಶಾಹಿದ್ ಕಪೂರ್ ಮತ್ತು ಕೃತಿ ಸನೋನ್ ನಟಿಸಿದ್ದಾರೆ. ಮುಂದೆ ಖ್ಯಾತ ನಿರ್ದೇಶಕ ಶ್ರೀರಾಮ್ ರಾಘವನ್ ನಿರ್ದೇಶನದ 'ಇಕ್ಕಿಸ್' ಚಿತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)