ನ್ಯೂಸ್

ಶನಿವಾರದ ವಿಶೇಷ ಟ್ರೇಡಿಂಗ್​: ಟಾಟಾ ಮೋಟಾರ್ಸ್, ಟಾಟಾ ಸ್ಟೀಲ್, ರಿಲಯನ್ಸ್ ಇಂಡಸ್ಟ್ರೀಸ್​ ಷೇರು ಬೆಲೆಗಳಲ್ಲಿ ದಾಖಲೆ

ಮುಂಬೈ: ಭಾರತದ ಅತಿದೊಡ್ಡ ಕಂಪನಿಗಳ ಷೇರುಗಳ ಬೆಲೆ ಜೀವಮಾನದ ಗರಿಷ್ಠ ಮಟ್ಟವನ್ನು ಮುಟ್ಟುವ ಏರುಗತಿಯ ಪ್ರವೃತ್ತಿಯಲ್ಲಿವೆ. ಟಾಟಾ ಮೋಟಾರ್ಸ್, ಟಾಟಾ ಸ್ಟೀಲ್,ಮತ್ತು ರಿಲಯನ್ಸ್ ಷೇರುಗಳು ಶನಿವಾರದಂದು ಹೊಸ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದವು.

ಟಾಟಾ ಮೋಟಾರ್ಸ್ ಷೇರುಗಳ ಬೆಲೆ ತನ್ನ ಮೇಲ್ಮುಖ ಪ್ರವೃತ್ತಿಯನ್ನು ಮುಂದುವರಿಸಿತು. ಶನಿವಾರದ ವಿಶೇಷ ಟ್ರೇಡಿಂಗ್​ನ ಇಂಟ್ರಾ ಡೇ ವಹಿವಾಟಿನಲ್ಲಿ 1% ಕ್ಕಿಂತ ಅಧಿಕ ಏರಿಕೆಯಾಗಿ 992.60 ರೂಪಾಯಿಯ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿತು.

ಟಾಟಾ ಸ್ಟೀಲ್ ಷೇರುಗಳ ಬೆಲೆ ಕೂಡ ಶನಿವಾರದ ಇಂಟ್ರಾ ಡೇ ವಹಿವಾಟಿನಲ್ಲಿ ಅಂದಾಜು 4% ಏರಿಕೆಯಾಗಿ ಜೀವಮಾನದ ಗರಿಷ್ಠ ಮಟ್ಟವಾದ 156.20 ರೂಪಾಯಿ ತಲುಪಿತು.

ರಿಲಯನ್ಸ್ ಇಂಡಸ್ಟ್ರೀಸ್​ ಷೇರಿನ ಬೆಲೆಯು ಬೆಲೆಯು 3,000 ರೂಪಾಯಿ ಗಡಿಯನ್ನು ದಾಟಿತು. ಶನಿವಾರ ಇಂಟ್ರಾ ಡೇ ವಹಿವಾಟಿನಲ್ಲಿ 3000.90 ರೂಪಾಯಿ ತಲುಪಿತು. ಇದು ಈ ಷೇರಿನ ಸಾರ್ವಕಾಲಿಕ ಗರಿಷ್ಠ ಬೆಲೆಯಾಗಿದೆ.