ಹೊಸನಗರ ತಾಲೂಕಿನ ಮಾರುತಿಪುರ ವೀರಾಂಜನೇಯ ದೇಗುಲದಲ್ಲಿ ಭಾಗವಹಿಸಿದ್ದ ಭಕ್ತ ಸಮೂಹ. 
ನ್ಯೂಸ್

ರಾಮಚಂದ್ರಾಪುರ ಮಠದಲ್ಲಿ ವಿಶೇಷ ಪೂಜೆ

Shivamogga - Desk - Praveena Kumar S

ಹೊಸನಗರ: ತಾಲೂಕಿನ ಬಹುತೇಕ ದೇವಾಲಯಗಳಲ್ಲಿ ವಿಶೇಷ ಕಾರ್ಯಕ್ರಮಗಳು ನೆರವೇರಿದವು. ಶ್ರೀ ರಾಮಚಂದ್ರಾಪುರ ಮಠ, ಕಾರಣಗಿರಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನ, ಮಾರುತಿಪುರ ವೀರಾಂಜನೇಯ ದೇಗುಲ, ಹೊಸನಗರದ ಶ್ರೀ ಗಂಗಾಧರೇಶ್ವರ ದೇವಸ್ಥಾನ, ಜಯನಗರ ವೀರಾಂಜನೇಯ ಸ್ವಾಮಿ, ನಗರ ಪಾರ್ವತಿ ನೀಲಕಂಠೇಶ್ವರ ದೇವಾಲಯ, ಪಂಚಮುಖಿ ಆಂಜನೇಯ ದೇಗುಲ, ಹುಲಿಕಲ್ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನ ಸೇರಿದಂತೆ ಬಹುತೇಕ ದೇವಾಲಯದಲ್ಲಿ ಸೋಮವಾರ ಬೆಳಗ್ಗೆಯಿಂದಲೇ ವಿಶೇಷ ಕಾರ್ಯಕ್ರಮಗಳು ಜರುಗಿದವು. ಶ್ರೀ ರಾಮತಾರಕ ಹವನ, ಅಖಂಡ ರಾಮಭಜನೆ ಸೇರಿದಂತೆ ವಿಶೇಷ ಪೂಜಾ ಕಾರ್ಯಕ್ರಮ ನಡೆಯಿತು. ಉತ್ಸವದ ಅಂಗವಾಗಿ ಕೆಲವಡೆ ಧಾರ್ಮಿಕ ಮೆರವಣಿಗೆ, ಅನ್ನಸಂತರ್ಪಣೆ, ಪಾನಕ ವಿತರಣೆ ನಡೆಯಿತು.