ನ್ಯೂಸ್

'ಉಸ್ತಾದ್​' ಪ್ರೀ-ರಿಲೀಸ್​ ಈವೆಂಟ್​​ಗೆ ಅತಿಥಿಯಾಗಿ ಸ್ಟಾರ್​ ನಿರ್ದೇಶಕ ಎಂಟ್ರಿ!

ಆಂಧ್ರಪ್ರದೇಶ: ಎಂ.ಎಂ. ಕೀರವಾಣಿ ಅವರ ಪುತ್ರ ಸಿಂಹ ಕೊಡೂರಿ ಅಭಿನಯದ 'ಉಸ್ತಾದ್'​ ಚಿತ್ರ ಇದೀಗ ಸದ್ದಿಲ್ಲದೇ ಸುದ್ದಿಯಾಗುತ್ತಿದ್ದು, ಆಗಸ್ಟ್​ 12 ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ಈ ಟಾಲಿವುಡ್​ ಚಿತ್ರದ ಪ್ರೀ-ರಿಲೀಸ್​ ಈವೆಂಟ್​ಗೆ ಇದೀಗ ಸ್ಟಾರ್​ ಡೈರ್​ಕ್ಟರ್​ ಅತಿಥಿಯಾಗಿ ಆಗಮಿಸಲಿದ್ದಾರೆ.

'ಉಸ್ತಾದ್​' ಚಿತ್ರದ ಚಿತ್ರೀಕರಣ ಸಂಪೂರ್ಣವಾಗಿ ಮುಗಿದಿದ್ದು, ಚಿತ್ರದ ಆಡಿಯೋ ಲಾಂಚ್​ ಅನ್ನು ಪ್ರೀ-ರಿಲೀಸ್​ ಈವೆಂಟ್​ನಲ್ಲಿ ಮಾಡಲು ಚಿತ್ರತಂಡ ಯೋಜಿಸಿದೆ. ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಖ್ಯಾತ ನಿರ್ದೇಶಕ ಎಸ್‌.ಎಸ್. ರಾಜಮೌಳಿ ಭಾಗವಹಿಸಲಿದ್ದು, ಈವೆಂಟ್​ ಹೈದರಾಬಾದ್‌ನ ಜೆಆರ್‌ಸಿ ಗ್ರೌಂಡ್ಸ್​ನಲ್ಲಿ ನಡೆಯಲಿದೆ ಎಂದು ಹೇಳಲಾಗಿದೆ.

'ಮಸೂದ' ಮತ್ತು 'ಬಳಗಂ' ಚಿತ್ರಗಳ ಮೂಲಕ ಹೆಸರುವಾಸಿಯಾಗಿರುವ ಕಾವ್ಯಾ ಕಲ್ಯಾಣರಾಮ್ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ರಜಿನಿಕಾಂತ್ ಅವರ ಜೈಲರ್​, ಮೆಗಾಸ್ಟಾರ್​ ನಟನೆಯ ಭೋಲಾ ಶಂಕರ್​ ಚಿತ್ರಗಳು ಬಿಡುಗಡೆಗೊಳ್ಳುವ ವಾರದಲ್ಲೇ ಉಸ್ತಾದ್​ ಕೂಡ ರಿಲೀಸ್​ ಆಗಲಿದ್ದು, ಬಾಕ್ಸ್​ ಆಫೀಸ್​ನಲ್ಲಿ ಹೇಗೆ ಪೈಪೋಟಿ ನೀಡಲಿದೆ ಎಂಬುದನ್ನು ಚಿತ್ರತಂಡ ನಿರೀಕ್ಷಿಸಿದೆ,(ಏಜೆನ್ಸೀಸ್).