ಎನ್.ಆರ್.ಪುರ ಶಾಸಕರ ಕಚೇರಿಯಲ್ಲಿ ಅಂಗವಿಕಲರಿಗೆ ಇಲಾಖೆಯಿಂದ ವಿವಿಧ ಸವಲತ್ತುಗಳನ್ನು ಶಾಸಕ ಟಿ.ಡಿ.ರಾಜೇಗೌಡ ವಿತರಿಸಿದರು. ಗೇರ್‌ಬೈಲ್ ನಟರಾಜ್, ಪ್ರಶಾಂತ್ ಶೆಟ್ಟಿ, ಜುಬೇದಾ, ಬಿನು, ಶಂಕರ, ಎಸ್.ನಯನಾ ಇದ್ದರು. 
ನ್ಯೂಸ್

ಸರ್ಕಾರದಿಂದ ಅಂಗವಿಕಲರಿಗೆ ವಿಶೇಷ ಸೌಲಭ್ಯ

ಜಿ.ಹೆಚ್. ಧನ್ಯಕುಮಾರ್

ಎನ್.ಆರ್.ಪುರ: ಸರ್ಕಾರದಿಂದ ಅಂಗವಿಕಲರಿಗೆ ವಿಶೇಷ ಸವಲತ್ತು ವಿತರಿಸಲಾಗುತ್ತಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು. ತಾಪಂ ಆವರಣದಲ್ಲಿ ಶುಕ್ರವಾರ ಅಂಗವಿಕಲರಿಗೆ ವಿವಿಧ ಸಲಕರಣೆ ವಿತರಿಸಿ ಮಾತನಾಡಿ, ಅಂಗವಿಕಲರಿಗೆ ದುಡಿಯಲು ಸರ್ಕಾರ ಅವಕಾಶ ಹಾಗೂ ಸಹಾಯ ನೀಡುತ್ತಿದೆ. ಇಲಾಖೆಯಿಂದ ಇಂದು 10 ಜನರಿಗೆ ವಾಟರ್‌ಬೆಡ್, 20 ವೀಲ್‌ಚೇರ್, 10 ಶ್ರವಣ ಸಾಧನ, 4 ವಾಕರ್, 4 ಊರುಗೋಲು, 4 ವಿಪಿ ಚೇರ್ ಮತ್ತಿತರ ಸಲಕರಣೆ ವಿತರಿಸಲಾಗಿದೆ ಎಂದರು.
ಚಂದ್ರಯಾನ-3 ಯಶಸ್ವಿಯಾಗಿದೆ. ಇದಕ್ಕೆ ಇಸ್ರೋ ಸಂಸ್ಥೆಯ ಎಲ್ಲ ವಿಜ್ಞಾನಿಗಳಿಗೂ ಅಭಿನಂದನೆಗಳು. ಭಾರತದ ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗಕ್ಕೆ ಜವಾಹರಲಾಲ್ ನೆಹರು ಭದ್ರ ಬುನಾದಿ ಹಾಕಿಕೊಟ್ಟಿದ್ದರು. ನಂತರ ರಾಜೀವ್ ಗಾಂಧಿ, ಇಂದಿರಾ ಗಾಂಧಿ ಅವರು ಉತ್ತೇಜನ ನೀಡಿದ್ದರು ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ. ಕೆ.ಪಿ.ಅಂಶುಮಂತ್, ಕೆಪಿಸಿಸಿ ಸದಸ್ಯ ಇಫ್ತಿಕಾರ್ ಆದಿಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೇರ್‌ಬೈಲ್ ನಟರಾಜ್, ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್ ಶೆಟ್ಟಿ, ಸದಸ್ಯರಾದ ಜುಬೇದಾ, ಸೈಯದ್ ವಸೀಂ, ಮುನಾವರ್ ಪಾಷಾ, ಇಒ ಎಸ್.ನಯನಾ ಇದ್ದರು.