ನ್ಯೂಸ್

VIDEO | ಆಟಗಾರ್ತಿಗೆ ಚುಂಬಿಸಿದ ಸ್ಪೇನ್‌ ಫುಟ್ಬಾಲ್ ಅಧ್ಯಕ್ಷ… ವಿವಾದದ ಬಳಿಕ ಬಹಿರಂಗವಾಗಿ ಕ್ಷಮೆಯಾಚಿಸಿದ

ನವದೆಹಲಿ: ಸ್ಪೇನ್‌ನ ಆಟಗಾರ್ತಿ ಜೆನ್ನಿಫರ್‌ ಹೆರ್ಮೊಸೊ ಅವರಿಗೆ ಸ್ಪೇನ್‌ ಫುಟ್ಬಾಲ್ ಸಂಸ್ಥೆ ಅಧ್ಯಕ್ಷ ಲೂಯಿಸ್ ರುಬಿಯಾಲೆಸ್ ವೇದಿಕೆಯಲ್ಲೇ ಚುಂಬಿಸಿದ್ದಾರೆ. ಈ ವಿಡಿಯೋ ವೈರಲ್​ ಆಗುತ್ತಿದ್ದಂತೆ ಸ್ಪೇನ್‌ ಫುಟ್ಬಾಲ್ ಸಂಸ್ಥೆ ಅಧ್ಯಕ್ಷ ಲೂಯಿಸ್ ರುಬಿಯಾಲೆಸ್ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ.

ಇಂಗ್ಲೆಂಡ್‌ ವಿರುದ್ಧ ಮಹಿಳಾ ಫುಟ್ಬಾಲ್ ವಿಶ್ವಕಪ್ ಫೈನಲ್‌ನಲ್ಲಿ ಸ್ಪೇನ್‌ ತಂಡ ಗೆದ್ದ ಬಳಿಕ ಸಂಭ್ರಮಾಚರಣೆ ವೇಳೆ ಆಟಗಾರ್ತಿಗೆ ಸ್ಪೇನ್‌ ಫುಟ್ಬಾಲ್ ಸಂಸ್ಥೆ ಅಧ್ಯಕ್ಷ ಲೂಯಿಸ್ ರುಬಿಯಾಲೆಸ್ ಚುಂಬಿಸಿದ್ದರು. ಈ ವಿಡಿಯೋ ವೈರಲ್​ ಆಗಿತ್ತು

ವಿಡಿಯೋದಲ್ಲಿ ಏನಿದೆ?: ಟ್ರೋಫಿ ವಿತರಣೆ ಸಂದರ್ಭ ಸ್ಪೇನ್‌ನ ಜೆನ್ನಿಫರ್‌ ಹೆರ್ಮೊಸೊ ಅವರಿಗೆ ವೇದಿಕೆಯಲ್ಲೇ ಲೂಯಿಸ್ ತುಟಿಗೆ ಚುಂಬಿಸಿದ್ದು, ಆ ಸನ್ನಿವೇಶದ ವಿಡಿಯೋ ವೈರಲ್ ಆಗಿದೆ.

ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿರುವ ಜೆನ್ನಿಫರ್‌, ಲೂಯಿಸ್‌ ನಡೆ ತಮಗೆ ಇಷ್ಟವಾಗಲಿಲ್ಲ ಎಂದಿದ್ದಾರೆ. ನಂತರ ಸ್ಪೇನ್‌ ಫುಟ್ಬಾಲ್ ಸಂಸ್ಥೆ ಅಧ್ಯಕ್ಷ ಲೂಯಿಸ್ ರುಬಿಯಾಲೆಸ್ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ.