ನ್ಯೂಸ್

ಮದ್ಯದ ಪಾರ್ಟಿ ಇಬ್ಬರು ಕಾನ್ ಸ್ಟೇಬಲ್ ಗಳ ಅಮಾನತು

ಮಂಜುನಾಥ ಕೋಳಿಗುಡ್ಡ


-112 ಪೆಟ್ರೋಲಿಂಗ್ ವಾಹನದಲ್ಲಿ ಪಾರ್ಟಿ
ಬೆಳಗಾವಿ: ಕರ್ತವ್ಯದಲ್ಲಿದ್ದಾಗ ಪಾರ್ಟಿ ಮಾಡಿದ್ದ ಆರೋಪದ ಮೇಲೆ ಇಬ್ಬರು ಪೊಲೀಸ್ ಕಾನ್ ಸ್ಟೇಬಲ್ ಗಳನ್ನು ಅಮಾನತ್ತು ಮಾಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ ಗುರುವಾರ ಆದೇಶ ಹೊರಡಿಸಿದ್ದಾರೆ.
ಮಂಗಳವಾರ ತಡರಾತ್ರಿಚಿಕ್ಕೋಡಿ ತಾಲ್ಲೂಕಿನ ನಾಗರಾಳ ಗ್ರಾಮದ ಹೊರ ವಲಯದಲ್ಲಿ ಪೊಲೀಸರು ಎಣ್ಣೆ ಪಾರ್ಟಿ ಮಾಡಿರುವ ಘಟನೆ ನಡೆದಿದ್ದು, 112 ಪೆಟ್ರೋಲಿಂಗ್ ವಾಹನದ ಎಚ್.ಎಮ್‌.ಕಮತೆ ಮತ್ತು ದುಮಾಳ ಅವರನ್ನು ಎಸ್ಪಿ ಅಮಾನತ್ತು ಮಾಡಿದ್ದಾರೆ.