ಬೆಂಗಳೂರು: ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲ್ವೆ ನಿಲ್ದಾಣಕ್ಕೆ ಆಗಮಿಸುವ ಕೆಲವು ರೈಲುಗಳ ಆಗಮನ ಮತ್ತು ನಿರ್ಗಮನದ ಸಮಯವನ್ನು ಪರಿಷ್ಕರಿಸಲಾಗಿದೆ. ಈ ರೈಲುಗಳ ಬದಲಾವಣೆಯು ಕೆಳಗೆ ತಿಳಿಸಿದ ಪ್ರಯಾಣದ ದಿನಾಂಕಗಳಿಂದ ಜಾರಿಗೆ ಬರಲಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.
- ಕೆಎಸ್ಆರ್ ಬೆಂಗಳೂರು-ಅಜ್ಮೀರ್ ಗರೀಬ್ ನವಾಜ್ ಸಾಪ್ತಾಹಿಕ ಎಕ್ಸ್ಪ್ರೆಸ್ ರೈಲು(ಸಂಖ್ಯೆ 16532) ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣಕ್ಕೆ ಜೂನ್ 21 ರಿಂದ ಬೆಳಗ್ಗೆ 6.00/6.10ಯ ಬದಲು 5.35ಕ್ಕೆ ಆಗಮಿಸಿ, 5:45ಕ್ಕೆ ಹೊರಡಲಿದೆ.
- ಕೆಎಸ್ಆರ್ ಬೆಂಗಳೂರು-ಗಾಂಧಿ ಧಾಮ್ ಸಾಪ್ತಾಹಿಕ ಎಕ್ಸ್ಪ್ರೆಸ್ ರೈಲು(ಸಂಖ್ಯೆ 16506) ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣಕ್ಕೆ ಜೂನ್ 22ರಿಂದ ಬೆಳಗ್ಗೆ 6.00/6.10ರ ಬದಲು 5.35ಕ್ಕೆ ಆಗಮಿಸಿ, 5.45ಕ್ಕೆ ಹೊರಡಲಿದೆ.
- ಕೆಎಸ್ಆರ್ ಬೆಂಗಳೂರು-ಜೋಧಪುರ ಸಾಪ್ತಾಹಿಕ ಎಕ್ಸ್ಪ್ರೆಸ್ ರೈಲು (ಸಂಖ್ಯೆ 16534) ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣಕ್ಕೆ ಜೂನ್ 23ರಿಂದ ಬೆಳಗ್ಗೆ 6.00/6.10ರ ಬದಲು 5.35ಕ್ಕೆ ಆಗಮಿಸಿ, 5.45ಕ್ಕೆ ಹೊರಡಲಿದೆ.
- ಕೆಎಸ್ಆರ್ ಬೆಂಗಳೂರು-ಜೋಧಪುರ ಸಾಪ್ತಾಹಿಕ ಎಕ್ಸ್ಪ್ರೆಸ್ ರೈಲು (ಸಂಖ್ಯೆ 16508) ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣಕ್ಕೆ ಜೂನ್ 24 ರಿಂದ ಬೆಳಗ್ಗೆ 6.00/6.10ರ ಬದಲು 5.35ಕ್ಕೆ ಆಗಮಿಸಿ, 5.45ಕ್ಕೆ ಹೊರಡಲಿದೆ.
- ಮೈಸೂರು-ಅಜ್ಮೀರ್ ದ್ವಿ-ಸಾಪ್ತಾಹಿಕ ಎಕ್ಸ್ಪ್ರೆಸ್ ರೈಲು ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣಕ್ಕೆ ಜೂನ್ 25 ರಿಂದ ಬೆಳಗ್ಗೆ 6.00/6.10ರ ಬದಲು 5.35ಕ್ಕೆ ಆಗಮಿಸಿ, 5.45ಕ್ಕೆ ಹೊರಡಲಿದೆ.