ಸಾಂದರ್ಭಿಕ ಚಿತ್ರ 
ನ್ಯೂಸ್

ಈ ಜಿಮ್​​ಗೆ ಆಂಟಿಯರಿಗೆ ಪ್ರವೇಶವಿಲ್ಲ, ಯುವತಿಯರಿಗೆ ಮಾತ್ರ ಅವಕಾಶ; ಕಾರಣವೇನು ಗೊತ್ತಾ?

ಸೌತ್ ಕೊರಿಯಾ: ಆಂಟಿಯರಿಗೆ ಪ್ರವೇಶ ವಿಲ್ಲ, ಯುವತಿಯರಿಗೆ ಅವಕಾಶವಿದೆ ಅನ್ನೋ  ಜಿಮ್ ಸೆಂಟರ್‌ನ ಮಾಲೀಕರೇ ನೋಟಿಸ್ ಬೋರ್ಡ್‌ನಲ್ಲಿ ಹಾಕಿದ್ದ ಈ ಸಂದೇಶ ಭಾರಿ ಕೋಲಾಹಲಕ್ಕೆ ಕಾರಣವಾಗಿದೆ.

ಆಂಟಿರಿಗೆ ಈ ಜಿಮ್‌ನಲ್ಲಿ ಅವಕಾಶವಿಲ್ಲ. ಕೇವಲ ಉತ್ತಮ ಮ್ಯಾನರ್ಸ್ ಹೊಂದಿರುವ ಸುಂದರ ಹೆಂಗಸರಿಗೆ ಅವಕಾಶವಿದೆ ಎಂದು ಸ್ಪಷ್ಟವಾಗಿ ಬರೆದು ನೋಟಿಸ್ ಬೋರ್ಡ್‌ನಲ್ಲಿ ಹಾಕಲಾಗಿದೆ. ಇದು ಸೌತ್ ಕೊರಿಯಾದ ಜಿಮ್‌ನಲ್ಲಿ ನಡೆದಿರುವ ಘಟನೆ. ಸಾಮಾಜಿಕ ಮಾಧ್ಯಮ, ಸೌತ್ ಕೊರಿಯಾ ಮಾಧ್ಯಮಗಳಲ್ಲೂ ಈ ವಿಚಾರ ಭಾರಿ ಚರ್ಚೆಯಾಗುತ್ತಿದೆ. ವಿವಾದ ಬೆನ್ನಲ್ಲೇ ಜಿಮ್ ಮಾಲೀಕ ಮಾಧ್ಯಮಕ್ಕೆ ತಮ್ಮ ನಿರ್ಧಾರದ ಕುರಿತು ಸ್ಪಷ್ಟನೆ ನೀಡಿದ್ದಾರೆ.

ಜಿಮ್‌ ಕೇಂದ್ರದಲ್ಲಿ ಆಂಟಿಯರಿಗೆ ಅವಕಾಶವಿಲ್ಲ ಎಂದು ನಾವು ಹಾಕಿದ್ದೇವೆ ನಿಜ. ಇದೇ ವೇಳೆ ಉತ್ತಮ ಗುಣದ, ಮ್ಯಾನರ್ಸ್ ಇರುವ ಹೆಂಗಸರಿಗೆ ಅವಕಾಶ ನೀಡಿದ್ದೇವೆ. ನಮ್ಮ ಜಿಮ್‌ಗೆ ಬರುವ ಎಲ್ಲಾ ಆಂಟಿಯರು ಜಿಮ್‌ಗೆ ಬಂದು ಇಲ್ಲಿನ ವಾಶಿಂಗ್ ಮಶೀನ್ ಬಳಕೆ ಮಾಡುತ್ತಾರೆ. ಜಿಮ್‌ಗೆ ಬರುವಾಗ ಮನೆಯ ಬಟ್ಟೆಗಳನ್ನು ತೆಗೆದುಕೊಂಡು ಬಂದು 1 ರಿಂದ 2 ಗಂಟೆ ವಾಶಿಂಗ್ ಮಶೀನ್‌ಗೆ ಹಾಕುತ್ತಾರೆ. ಆಂಟಿಯರಿಗೆ ನೀರು, ವಾಶಿಂಗ್ ಪೌಡರ್, ವಿದ್ಯುತ್ ಎಲ್ಲವೂ ನಮಗೆ ಹೆಚ್ಚಾಗಿ ಖರ್ಚಾಗುತ್ತಿದೆ. ಜಿಮ್‌ನಲ್ಲಿ ವಾಶಿಂಗ್ ಮಶೀನ್ ಇಡಲಾಗಿದೆ. ಇದು ಆಗಮಿಸುವವರಿಗೆ ಬೆವರು ಒರೆಸಿಕೊಳ್ಳಲು ಟವಲ್ ಜಿಮ್‌ನಿಂದ ನೀಡಲಾಗುತ್ತದೆ. ಈ ಟವಲ್‌ಗಳನ್ನು ಪ್ರತಿದಿನ ಒಗೆಯಲಾಗುತ್ತದೆ. ಆದರೆ ಅವರ ಮನೆಯ ಬಟ್ಟೆಗಳನ್ನು ಒಗೆಯಲು ಅಲ್ಲ ಎಂದು ಮಾಲೀಕರು ಹೇಳಿದ್ದಾರೆ.