ಸಾಂದರ್ಭಿಕ ಚಿತ್ರ 
ನ್ಯೂಸ್

ಜಾಲತಾಣದಲ್ಲಿ ಪೋಸ್ಟ್​ ಹಾಕಿದ್ದಕ್ಕೇ ಮಹಿಳೆಗೆ ಶಿಕ್ಷೆ- ಮಾನವ ಹಕ್ಕುಗಳ ಕಾರ್ಯಕರ್ತರ ಆಕ್ರೋಶ

ನವದೆಹಲಿ: ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್​ ಹಾಕಿದ ಮಹಿಳೆಯೊಬ್ಬರಿಗೆ ಸೌದಿ ಅರೇಬಿಯಾದ ಕೋರ್ಟ್​ 45 ವರ್ಷ ಸೆರೆವಾಸದ ತೀರ್ಪು ಪ್ರಕಟಿಸಿದೆ.

"ಸೌದಿಯ ಸಾಮಾಜಿಕ ಬಂಧವನ್ನು ಹರಿಯಲು ಇಂಟರ್​ನೆಟ್​ ಬಳಸಿದ್ದಕ್ಕಾಗಿ' ಸೌದಿ ವಿಶೇಷ ಕ್ರಿಮಿನಲ್​ ಕೋರ್ಟ್​ ನೌರಾ ಬಿನ್​ ಸಯೀದ್​ ಅಲ್​-ಖಹ್ತಾನಿಗೆ ಈ ಶಿಕ್ಷೆ ವಿಧಿಸಿದೆ ಎಂದು ವಾಷಿಂಗ್ಟನ್​ ಮೂಲದ "ಡಾನ್​' ಸಂಸ್ಥೆ ಹೇಳಿದೆ. ಮಹಿಳೆ ಹಾಕಿದ ಪೋಸ್ಟ್​ಗಳೇನು ಎನ್ನುವುದನ್ನು ಅದು ತಿಳಿಸಿಲ್ಲ.ಮಹಿಳಾ ಕಾರ್ಯಕರ್ತರ ಮೇಲಿನ ದಬ್ಬಾಳಿಕೆಗೆ ಇದು ತಾಜಾ ನಿದರ್ಶನವಾಗಿದೆ ಎಂದು ಮಾನವ ಹಕ್ಕುಗಳ ಕಾರ್ಯಕರ್ತರು ಆರೋಪಿಸಿದ್ದಾರೆ.