I Forgot To Pay 
ನ್ಯೂಸ್

ಕ್ಷಮಿಸಿ ಸರ್​ ಹಣ ಕೊಡಲು ಮರೆತಿದ್ದೆ: ಕಳ್ಳತನ ಮಾಡುತ್ತಿದ್ದಾಗ ಸಿಕ್ಕಿಬಿದ್ದ ಭಾರತೀಯ ಮಹಿಳೆ! ವಿಡಿಯೋ ವೈರಲ್​ I Forgot To Pay

ಅಮೆರಿಕ: ಭಾರತೀಯ ಮೂಲದ ಯುವತಿಯೊಬ್ಬಳು ಅಂಗಡಿಗಳಲ್ಲಿ ಬಟ್ಟೆಗಳನ್ನು ಕಳ್ಳತನ ಮಾಡುವಾಗ ಸಿಕ್ಕಿಬಿದ್ದಿರುವ ಘಟನೆ ಅಮೆರಿಕದಲ್ಲಿ ನಡೆದಿದ್ದು, ಇದೀಗ ವಿಡಿಯೋ ಎಲ್ಲೆಡೆ ವೈರಲ್​ ಆಗಿದೆ.
ವರದಿಯ ಪ್ರಕಾರ, ಮಹಿಳೆಯು ಕದಿಯಲು ಇಷ್ಟಪಡುತ್ತಿರುವ ವಸ್ತುಗಳು ಎಲ್ಲಾ ಪುರುಷ ಉತ್ಪನ್ನಗಳು ಎಂದು ತಿಳಿದು ಬಂದಿವೆ. ಆಕೆಯ ಸಹೋದರನಿಗೆ "ಮೇಡ್ ಇನ್ ಯುಎಸ್ಎ" ಉತ್ಪನ್ನಗಳ ಬಗ್ಗೆ ಒಲವು ಹೆಚ್ಚಾಗಿದೆ. ಆದರೆ, ಅವುಗಳನ್ನು ಖರೀದಿಸಲು ಹಣವಿಲ್ಲದ ಕಾರಣದಿಂದ ಕದ್ದಿದ್ದೇನೆ ಎಂದು ಪೊಲೀಸರಿಗೆ ತಿಳಿಸಿದ್ದಾಳೆ.
ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್​ ಆಗಿದ್ದು, ಇದರಲ್ಲಿ ಯುವತಿಯು ಹಣ ಪಾವತಿಸದೆ ಬಟ್ಟೆಗಳನ್ನು ತೆಗೆದುಕೊಂಡ ಆರೋಪದ ನಂತರ ಈಕೆ, ಪೊಲೀಸ್ ಅಧಿಕಾರಿಗಳತ್ತ ಕ್ಷಮೆಯಾಚಿಸಿದ್ದು, ಈ ವಸ್ತುಗಳಿಗೆ ಹಣ ಕೊಡಲು ಮರೆತಿದ್ದೇನೆ. ನನಗೆ ಒಂದು ಅವಕಾಶ ನೀಡಿ ನನ್ನನ್ನು ಅರೆಸ್ಟ್​ ಮಾಡಬೇಡಿ ಎಂದು ಬೇಡಿಕೊಂಡಿದ್ದಾಳೆ.
ಆದಾಗ್ಯೂ, ಅಲ್ಲಿನ ಪೊಲೀಸರು ಆಕೆಯ ಮನವಿಯನ್ನು ತಿರಸ್ಕರಿಸಿ ಕೈಗಳಿಗೆ ಬೇಡಿ ಹಾಕಿ ಪೊಲೀಸ್​ ಠಾಣೆಗೆ ಕರೆದೊಯ್ಯಲಾಯಿತು. ಆಕೆಯ ಅಪರಾಧ ಚಿಲ್ಲರೆ ಕಳ್ಳತನದ ಆರೋಪದಡಿ ಆಕೆ ಶಿಕ್ಷೆ ವಿಧಿಸಬಹುದು ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಕಳೆದ ತಿಂಗಳ ಆರಂಭದಲ್ಲಿ ನಡೆದ ಪ್ರತ್ಯೇಕ ಘಟನೆಯಲ್ಲಿ, ಅಮೆರಿಕದ ಟಾರ್ಗೆಟ್ ಅಂಗಡಿಯಲ್ಲಿ ಭಾರತೀಯ ಯುವತಿಯೊಬ್ಬಳು ಸುಮಾರು 1 ಲಕ್ಷ ಮೌಲ್ಯದ ವಸ್ತುಗಳನ್ನು ಕದ್ದ ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದಳು (ಏಜೆನ್ಸೀಸ್​).