ಬಿಜೆಪಿ ಕಾರ್ಯಕರ್ತರು ಸೊರಬದ ಶ್ರೀ ರಂಗನಾಥ ದೇವಸ್ಥಾನದ ಅವರಣದಲ್ಲಿ ವಿಜಯೋತ್ಸವ ಆಚರಿಸಿದರು. ಶಿವಕುಮಾರ ಕಡಸೂರು, ಸುಧೀರ್ ಪೈ, ಗುರುಮೂರ್ತಿ, ಲಿಂಗರಾಜು, ಕನಕದಾಸ್, ಧರ್ಮಪ್ಪ, ಜಾನಕಪ್ಪ, ಡಿ.ಶಿವಯೋಗಿ ಇತರರಿದ್ದರು.  
ನ್ಯೂಸ್

ಮೂಲ ಸೌಕರ್ಯಗಳಿಗೆ ಒತ್ತು ನೀಡಲಿ

ಜಿ. ಗಜೇಂದ್ರ

ಸೊರಬ: ಬಿ.ವೈ.ರಾಘವೇಂದ್ರ ಗೆಲುವು ಸಾಧಿಸುತ್ತಿದ್ದಂತೆ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಮಂಗಳವಾರ ಪಟ್ಟಣದ ಶ್ರೀ ರಂಗನಾಥ ದೇವಸ್ಥಾನದ ಅವರಣದ ಮುಂಭಾಗ ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ವಿಜಯೋತ್ಸವ ಆಚರಿಸಿದರು.
ಮುಖಂಡ ಎಂ.ಡಿ.ಉಮೇಶ್ ಮಾತನಾಡಿ, ಚುನಾವಣಾ ಪೂರ್ವದಲ್ಲಿಯೇ ಬಿ.ವೈ.ರಾಘವೇಂದ್ರ ಅವರು ಸುಮಾರು 2.5 ಲಕ್ಷ ಮತಗಳ ಅಂತರದಿಂದ ಗೆಲುವು ಸಾಸಲಿದ್ದಾರೆ ಎಂಬ ವಿಶ್ವಾಸವಿತ್ತು. ಇದು ಸತ್ಯವಾಯಿತು. ಕ್ಷೇತ್ರದಲ್ಲಿ ಕಳೆದ ಒಂದು ವರ್ಷದಿಂದ ಅಭಿವೃದ್ಧಿ ಕುಂಠಿತವಾಗಿದೆ. ನೂತನ ಸಂಸದರು ಕ್ಷೇತ್ರದಲ್ಲಿ ನೀರಾವರಿ ಸೇರಿದಂತೆ ಅನೇಕ ಮೂಲ ಸೌಕರ್ಯಗಳಿಗೆ ಒತ್ತು ನೀಡಬೇಕಿದೆ ಎಂದರು.
ಈಗಾಗಲೇ ಬರಗಾಲದಿಂದ ರೈತ ಸಮುದಾಯ ತತ್ತರಿಸಿ ಹೋಗಿದೆ. ಅವರಿಗೆ ಬೆಳೆ ಪರಿಹಾರ ಮತ್ತು ನೀರಾವರಿ ಸೌಲಭ್ಯಗಳನ್ನು ಕಲ್ಪಿಸುವತ್ತ ಸಂಸದರು ಒತ್ತು ನೀಡಬೇಕು ಎಂದರು. ಶಿವಕುಮಾರ ಕಡಸೂರು, ಸುಧೀರ್ ಪೈ, ಗುರುಮೂರ್ತಿ, ಲಿಂಗರಾಜು, ಕನಕದಾಸ್, ಧರ್ಮಪ್ಪ, ಜಾನಕಪ್ಪ, ಡಿ.ಶಿವಯೋಗಿ ಇತರರಿದ್ದರು.