ಸೂರ್ಯಪಾನ ಎಂದರೇನು? ನಮ್ಮ ಬದುಕು ಸುಖವಾಗಿರಲು; ದುಃಖದಿಂದ ದೂರವಿರಲು, ಆನಂದ, ನೆಮ್ಮದಿ ಶಾಂತಿಯಿಂದಿರಲು ಶಕ್ತಿ ಬೇಕೇ ಬೇಕು. ಆ ಪ್ರಾಣಚೈತನ್ಯವನ್ನು ಆಹಾರ, ನೀರು, ಗಾಳಿ, ಭೂಮಿ, ಸೂರ್ಯನ ಬೆಳಕು ಶಾಖದಿಂದ ಪಡೆಯುತ್ತೇವೆ. ನಾವು ನಮ್ಮ ದೈನಂದಿನ ಆಹಾರದ ಅಗತ್ಯಗಳಿಗೆ ಅಪ್ರತ್ಯಕ್ಷವಾಗಿ ಸೂರ್ಯನನ್ನು ಆಶ್ರಯಿಸಿದ್ದೇವೆ.
ಸೂರ್ಯನ ಶಕ್ತಿಯನ್ನು ಉಪಯೋಗಿಸಿಕೊಂಡು ಸಸ್ಯಜಾತಿಗಳು, ಅವುಗಳನ್ನು ಆಹಾರವಾಗಿಸಿಕೊಂಡು ಪ್ರಾಣಿಜಾತಿಗಳು ಬೆಳೆಯುತ್ತವೆ. ಮನುಷ್ಯ ಸಸ್ಯಜನ್ಯ ಆಹಾರವನ್ನಾಗಲೀ, ಪ್ರಾಣಿಜನ್ಯ ಆಹಾರವನ್ನಾಗಲೀ ಉಪಯೋಗಿಸಿದಾಗ ಅವನು ಸೂರ್ಯನ ಶಕ್ತಿಯನ್ನು ಅಪ್ರತ್ಯಕ್ಷವಾಗಿ ಉಪಯೋಗಿಸಿಕೊಂಡು ತನ್ನ ದೈನಂದಿನ ಶಕ್ತಿಯ ಅಗತ್ಯಗಳನ್ನು ಪೂರೈಸಿಕೊಳ್ಳುತ್ತಾನೆ ಎಂಬುದು ಇದರರ್ಥ.
ಈ ಅಪ್ರತ್ಯಕ್ಷ ಮಾರ್ಗವನ್ನು ಬಿಟ್ಟು ಮನುಷ್ಯನು ನೇರವಾಗಿ ಸೂರ್ಯನ ಶಕ್ತಿಯನ್ನು ಉಪಯೋಗಿಸಿಕೊಳ್ಳುವಂತಾದರೆ? ಸಸ್ಯಗಳು ತಮ್ಮಲ್ಲಿರುವ ಹರಿತ್ತು-ಕ್ಲೋರೋಫಿಲ್ ಉಪಯೋಗಿಸಿ ತಮಗೆ ಬೇಕಾದ ಆಹಾರವನ್ನು, ಶಕ್ತಿಯನ್ನು ಉಪಯೋಗಿಸುವಂತೆ, ಮನುಷ್ಯನೂ ತನ್ನ ದೇಹದಲ್ಲೇ ಶಕ್ತಿಯನ್ನು ಸೂರ್ಯನಿಂದ ಪಡೆಯುವಂತಾದರೆ? ಆಗ ಮನುಷ್ಯನಿಗೆ ಆಹಾರದ ಅಗತ್ಯ ಬೀಳುವುದಿಲ್ಲ. ಅವನು ನೇರವಾಗಿ ಸೂರ್ಯನಿಂದ ಶಕ್ತಿಯನ್ನು ಪಡೆದು ತನ್ನ ದೈಹಿಕ ಅಗತ್ಯಗಳಿಗೆ ಬೇಕಾದಂತೆ ಈ ಶಕ್ತಿಯನ್ನು ಮಾರ್ಪಡಿಸಿಕೊಳ್ಳಬಲ್ಲ. ಆಹಾರವೇ ದೇಹದ ದೋಷಗಳಿಗೂ, ಸಾಮಾಜಿಕ ಕಲಹಕ್ಕೂ ಕಾರಣ. ಈ ಮೂಲವನ್ನೇ ಕಿತ್ತೆಸೆದರೆ ತಾನಾಗಿ ದೇಹದ ಆರೋಗ್ಯ, ಸಾಮಾಜಿಕ ಶಾಂತಿ ನೆಲೆಸುತ್ತದೆ. ಈ ರೀತಿ ಸೂರ್ಯನ ಶಕ್ತಿಯನ್ನು ಪಡೆಯುವ ಕ್ರಿಯೆ ಕಣ್ಣಿನ ಮೂಲಕವಾಗಲೀ, ಚರ್ಮದ ಮೂಲಕವಾಗಲೀ ಅಥವಾ ದೇಹದ ಇನ್ನಾವುದೇ ಅಂಗದ ಮೂಲಕವಾಗಲೀ ನಡೆಯಬಹುದು.
ಮನುಷ್ಯ ಹುಟ್ಟಿದಾಗಿನಿಂದ ಒಂದಲ್ಲ ಒಂದು ರೀತಿಯಲ್ಲಿ ಸೂರ್ಯನ ಶಕ್ತಿಯನ್ನು ಪಡೆಯುತ್ತಲೇ ಇರುತ್ತಾನೆ. ಸೂರ್ಯನಿಂದ ಹೊರಡುವ ವಿಶ್ವಕಿರಣಗಳು ಸತತವಾಗಿ ದೇಹದ ಮೂಲಕ ಹರಿದುಹೋಗುತ್ತಿರುತ್ತದೆ. ಆದರೆ, ಸದ್ಯಕ್ಕೆ ಕಣ್ಣಿನ ಮೂಲಕ ಸೂರ್ಯನ ಶಕ್ತಿಯನ್ನು ಪಡೆಯುವ ಕ್ರಿಯೆ, ಅದನ್ನು ದೈಹಿಕ ಅಗತ್ಯಗಳಿಗೆ ಮಾರ್ಪಡಿಸಬಲ್ಲ ತಂತ್ರವನ್ನೇ ನಾವು ಸೂರ್ಯಪಾನ ಎಂದು ಹೇಳುತ್ತೇವೆ.
ಊರ್ಧ್ವಮುಖ ಶ್ವಾನಾಸನ: ನಾಯಿ ಆಕಾಶಕ್ಕೆ ಮುಖ ಮಾಡಿ ಕೂಗುವ ಭಂಗಿಯನ್ನು ಹೋಲುವ ಆಸನ. ಸೂರ್ಯನಮಸ್ಕಾರ, ಸಾಷ್ಟಾಂಗ ನಮಸ್ಕಾರದ ನಂತರ ಹಸ್ತಗಳು ಹಾಗೂ ಪಾದಗಳು ಸ್ಥಳದಲ್ಲೇ ಇರಲಿ. ಶ್ವಾಸವನ್ನು ತೆಗೆದುಕೊಳ್ಳುತ್ತ ಬೆನ್ನನ್ನು ಕೆಳಮುಖವಾಗಿ ಹಿಗ್ಗಿಸುತ್ತ ಎದೆಯ ಭಾಗವನ್ನು ವಿಸ್ತರಿಸುತ್ತ ಮುಂದೆ ಬಂದು ತಲೆಯನ್ನು ಮೇಲೆತ್ತಿ ನೋಡುವ ಭಂಗಿ. ಮಂಡಿಗಳು ನೆಲದಿಂದ ಮೇಲಿರಲಿ.
ಲಾಭಗಳು: ಸೊಂಟ, ಬೆನ್ನುನೋವು, ಅಸ್ತಮಾ ನಿವಾರಣೆ, ತೋಳು ಬಲಗೊಳ್ಳಲು ಹಾಗೂ ಭುಜ ವಿಸ್ತಾರಕ್ಕೆ ಸಹಕಾರಿ.