ಮುಂಬೈ: ತಮ್ಮ ಪರೋಪಕಾರಿ ಕೆಲಸಗಳಿಂದ ಸದಾ ಮುನ್ನೆಲೆಗೆ ಬರುವ ನಟ ಸೋನು ಸೂದ್(Sonu Sood) ಬಾಲಿವುಡ್ನಲ್ಲಿ ಮಾತ್ರವಲ್ಲ ಸೌತ್ ಸಿನಿಮಾಗಳಲ್ಲಿಯೂ ನಟಿಸಿ ತಮ್ಮದೇ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇತ್ತೀಚೆಗೆ ನಟ #DrugFreeFuture ಅಭಿಯಾನದ ಮೂರನೇ ಸೀಸನ್ ಅನ್ನು ಬೆಂಬಲಿಸಲು ಅಹಮದಾಬಾದ್‌ನಲ್ಲಿ ಗಿಫ್ಟ್ ಸಿಟಿ ರನ್‌ನಲ್ಲಿ ಭಾಗವಹಿಸಿದ್ದರು. ಈ ಅಭಿಯಾನವು ಮಾದಕ ವ್ಯಸನದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸಲು ಕೇಂದ್ರೀಕರಿಸುತ್ತದೆ.
ಇದನ್ನು ಓದಿ: ಹಿಂದಿ, ತೆಲುಗು ಉದ್ಯಮದಿಂದ ಬಂದವಳು; ಹೀಗೇಳಿದ್ದು ನೆನಪಿದೆ ಎಂದಿದ್ದೇಕೆ ಪಿಗ್ಗಿ ಚಾಪ್ಸ್ | Priyanka Chopra
ಅಭಿಯಾನದಲ್ಲಿ ಜನರನ್ನು ನೋಡಲು ಅದರಲ್ಲೂ ಮುಂಗಾನೆ ಇಂಟಹ ಫಿಟ್ ಜನರನ್ನು ನೋಡಲು ಬಹಳ ಸಂತೋಷವಾಗುತ್ತದೆ. ಅವರಲ್ಲಿನ ಉತ್ಸಾಹವನ್ನು ನೀವು ನೋಡಬಹುದು, ನೋಡಿ ಅವರು ಓಡುವುದನ್ನು ನೋಡಿದರೆ ಹೆಮ್ಮೆ ಎನ್ನಿಸುತ್ತದೆ ಎಂದರು. ಇದೇ ಸಂದರ್ಭದಲ್ಲಿ ನಟ ಸೋನು ಸೂದ್ ತಮ್ಮ ಮುಂಬರುವ ಆಕ್ಷನ್ ಚಿತ್ರ 'ಫತೇಹ್' ಕುರಿತು ಮಾತನಾಡಿದ್ದಾರೆ. ಸೈಬರ್ ಅಪರಾಧದ ವಿಷಯವನ್ನು ಆಧರಿಸಿರುವ ಫತೇಹ್ ಸಿನಿಮಾವು ಇಂದಿನ ಡಿಜಿಟಲ್ ಯುಗದಲ್ಲಿ ಗಂಭೀರ ಸಮಸ್ಯೆಯಾಗಿರುವ ಸೈಬರ್ ವಂಚನೆಯ ಅಪಾಯಗಳ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ ಎಂದು ತಿಳಿಸಿದರು.
ಫತೇಹ್ ಸಿನಿಮಾ ಸೋನು ಸೂದ್ ನಿರ್ದೇಶನದ ಚೊಚ್ಚಲ ಸಿನಿಮಾವಾಗಿದೆ. ಈ ಸಿನಿಮಾದ ಟೀಸರ್ ಈಗಾಗಲೆ ಬಿಡುಗಡೆಯಾಗಿದ್ದು, ಜನರಲ್ಲಿ ನಿರೀಕ್ಷೆಯನ್ನು ಹೆಚ್ಚಿಸಿದೆ. ಫತೇಹ್ ಸಿನಿಮಾ ಸೈಬರ್ ಕ್ರೈಂನಿಂದ ಹೇಗೆ ಸುರಕ್ಷಿತವಾಗಿರಬೇಕು ಎಂಬ ಅರಿವು ಮೂಡಿಸುತ್ತದೆ. ಇದು ದೇಶದ ಜನರಿಗಾಗಿ ನಿರ್ಮಿಸಿರುವ ಸಿನಿಮಾ. ನಾವು ಈ ಸಿನಿಮಾದ ಬಾಕ್ಸ್ ಆಫೀಸ್ ಕಲೆಕ್ಷನ್ ಅನ್ನು ವೃದ್ಧಾಶ್ರಮ ಮತ್ತು ಅನಾಥಾಶ್ರಮಗಳಿಗೆ ಕಳುಹಿಸಲು ಪ್ರಯತ್ನಿಸುತ್ತೇವೆ ಎಂದು ಹೇಳಿದರು.
ಫತೇಹ್ ಸಿನಿಮಾ ಟೀಸರ್ ಹಂಚಿಕೊಳ್ಳುವಾಗ #ಫತೇಹ್! ಇದುವರೆಗಿನ ಅತಿದೊಡ್ಡ ಆಕ್ಷನ್-ಪ್ಯಾಕ್ಡ್ ಥ್ರಿಲ್ಲರ್‌ಗಾಗಿ ಸಿದ್ಧರಾಗಿ!" ಎಂದು ಜಾಲತಾಣದಲ್ಲಿ ಚಿತ್ರತಂಡ ಬರೆದಿತ್ತು. ಸಿನಿಮಾದಲ್ಲಿ ಸೋನು ಸೂದ್ ಜತೆಗೆ ಜಾಕ್ವೆಲಿನ್ ಫರ್ನಾಂಡೀಸ್, ನಾಸಿರುದ್ದೀನ್ ಷಾ, ವಿಜಯ್ ರಾಝ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾ 2025 ಜನವರಿ 10ರಂದು ಬಿಡುಗಡೆಯಾಗಲಿದೆ.(ಏಜೆನ್ಸೀಸ್)