ನ್ಯೂಸ್

ಮತ್ತೊಂದು ಉತ್ತಮ ಯೋಜನೆಗೆ ಕೈಹಾಕಿದ ಸೋನು ಸೂದ್! 500 ವೃದ್ಧರಿಗಾಗಿ ವೃದ್ಧಾಶ್ರಮ ಸ್ಥಾಪನೆಯ ಘೋಷಣೆ Sonu Sood

Sonu Sood :   ನಟ ಸೋನು ಸೂದ್ ಬುಧವಾರ (ಜುಲೈ 30) 52 ವರ್ಷಕ್ಕೆ ಕಾಲಿಟ್ಟರು. ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಈ ನಟ 500 ಹಿರಿಯ ನಾಗರಿಕರಿಗೆ ವೃದ್ಧಾಶ್ರಮವನ್ನು ಘೋಷಿಸುವ ಮೂಲಕವಾಗಿ ಮತ್ತೆ ಜನರ ಹೃದಯ ಗೆದಿದ್ದಾರೆ.

ಈ ರಿಯಲ್ ಹೀರೋಗೆ ಹುಟ್ಟುಹಬ್ಬದ ಶುಭಾಶಯ ಕೋರಿದ ಅನೇಕ ಅಭಿಮಾನಿಗಳು ಮತ್ತು ನೆಟಿಜನ್‌ಗಳು ಸೋನು ಸೂದ್ ಅವರ ಅಭಿಮಾನಿಗಳು ಅನೇಕ ಸ್ಥಳಗಳಲ್ಲಿ ಸೇವಾ ಕಾರ್ಯಕ್ರಮಗಳನ್ನು ಸಹ ಆಯೋಜಿಸಿದ್ದರು. ಈಗಾಗಲೇ ಅನೇಕ ಒಳ್ಳೆಯ ಕಾರ್ಯಗಳನ್ನು ಮಾಡಿರುವ ಮತ್ತು ನಿಜವಾದ ಹೀರೋ ಎಂದು ಪರಿಗಣಿಸಲ್ಪಟ್ಟಿರುವ ಸೋನು ಸೂದ್ ತಮ್ಮ ಹುಟ್ಟುಹಬ್ಬದಂದು ಮತ್ತೊಂದು ಉತ್ತಮ ಕೆಲಸವನ್ನು ಪ್ರಾರಂಭಿಸಿದ್ದಾರೆ.

ವೃದ್ಧಾಶ್ರಮವನ್ನು ಸ್ಥಾಪಿಸುತ್ತಿರುವುದಾಗಿ  ನಟ ಅಧಿಕೃತವಾಗಿ ಘೋಷಿಸಿದರು. ಇದರಲ್ಲಿ ಸುಮಾರು 500 ವೃದ್ಧರಿಗೆ ಆಶ್ರಯ ನೀಡಲಾಗುವುದು. ಅನಾಥ ವೃದ್ಧರಿಗೆ ಪ್ರೀತಿಯ ವಾತಾವರಣವನ್ನು ಒದಗಿಸಲು ಈ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ. ವೃದ್ಧರಿಗೆ ಆಶ್ರಯ, ವೈದ್ಯಕೀಯ ಸೌಲಭ್ಯಗಳು, ಪೋಷಣೆ ಮತ್ತು ಇತರ ಸೌಲಭ್ಯಗಳನ್ನು ಒದಗಿಸಲು ಈ ವೃದ್ಧಾಶ್ರಮವನ್ನು ಸ್ಥಾಪಿಸಲಾಗುತ್ತಿದೆ ಎಂದು ಸೋನು ಸೂದ್ ಹೇಳಿದ್ದಾರೆ.

ಸೋನು ಸೂದ್ ತಮ್ಮ ಸೇವಾ ಕಾರ್ಯಕ್ರಮಗಳ ಭಾಗವಾಗಿ ಪ್ರತಿ ರಾಜ್ಯದಲ್ಲೂ ವೃದ್ಧಾಶ್ರಮಗಳು ಮತ್ತು ಉಚಿತ ಶಾಲೆಗಳನ್ನು ಸ್ಥಾಪಿಸುವ ಗುರಿ ಇದೆ. ಇದಕ್ಕೆ ಸಂಬಂಧಿಸಿದ ಕೆಲಸ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ಅವರು ಹೇಳಿದರು.

ಸೋನು ಸೂದ್ ಕೊನೆಯದಾಗಿ ನಟಿಸಿದ್ದು ಆಕ್ಷನ್ ಥ್ರಿಲ್ಲರ್ ಸಿನಿಮಾ ಫತೇಹ್. ಅವರೇ ನಿರ್ದೇಶಿಸಿದ ಈ ಸಿನಿಮಾ ಚೆನ್ನಾಗಿ ಮೂಡಿಬಂತು. ಸೋನು ಸೂದ್ ಪ್ರಸ್ತುತ 'ನಂದಿ' ಎಂಬ ಇನ್ನೊಂದು ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಶೀಘ್ರದಲ್ಲೇ ಆರಂಭವಾಗಲಿದೆ.