ನ್ಯೂಸ್

VIDEO| ತಾಯಿಯ ಮದುವೆಯಲ್ಲಿ ಮಲತಂದೆಯನ್ನು ಸ್ವಾಗತಿಸಿದ ಮಗ!

ಅಮೆರಿಕಾ: ಅನಿರೀಕ್ಷಿತ ಕಾರಣಗಳಿಂದ ಪತಿ-ಪತ್ನಿ ಬೇರೆಯಾದರೆ ಮಕ್ಕಳು ಪೋಷಕರಲ್ಲಿ ಒಬ್ಬರಿಂದ ದೂರವಿರುತ್ತಾರೆ. ತಮ್ಮ ಹೆತ್ತವರು ಮರುಮದುವೆ ಮಾಡಿಕೊಂಡರೆ ಹೆಚ್ಚಿನ ಮಕ್ಕಳು ವಿರೋಧಿಸುತ್ತಾರೆ. ಆದರೆ ಇಲ್ಲೊಬ್ಬ ಬಾಲಕ ಮಾತ್ರ ತನ್ನ ತಾಯಿಯ ಮದುವೆಯಲ್ಲಿ ಮಲತಂದೆಯನ್ನು ಸ್ವಾಗತಿಸಿದ್ದಾರೆ. ಈ ವೀಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ಸಖತ್​​ ವೈರಲ್​ ಆಗಿದೆ.

ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​ ಆಗುತ್ತೀರುವ ವಿಡಿಯೋದಲ್ಲಿ, ಜೋರ್ಡಾನ್ ಎಂಬ ಬಾಲಕ ತನ್ನ ತಾಯಿ ಮರುಮದುವೆಯಾಗುತ್ತಿರುವಾಗ ತನ್ನ ಮಲತಂದೆಗೆ ಸ್ವಾಗತದ ಮಾತುಗಳನ್ನಾಡುವುದನ್ನು ನೋಡಬಹುದಾಗಿದೆ. ಮದುವೆ ಬಂದಿದ್ದ ಅತಿಥಿಗಳು ಅವರ ಭಾಷಣವನ್ನು ಗಮನವಿಟ್ಟು ಆಲಿಸಿದರು. ಜೋರ್ಡಾನ್ ತನ್ನ ಭಾಷಣದಲ್ಲಿ ತನ್ನ ಮಲತಂದೆ ವಿನ್ನಿ ತನ್ನ ತಾಯಿಯನ್ನು ಮದುವೆಯಾಗಿರುವುದು ಅದೃಷ್ಟವೆಂದು ಭಾವಿಸುತ್ತೇನೆ. ಅತ್ಯುತ್ತಮ ವ್ಯಕ್ತಿಯಾಗಿದ್ದಕ್ಕಾಗಿ ಧನ್ಯವಾದ ಹೇಳಿದ್ದಾನೆ. ತಮ್ಮ ಭಾಷಣಕ್ಕೆ ಒಂದಷ್ಟು ಕಾಮಿಡಿ ಕೂಡ ಸೇರಿಸಿ ಮಾತನಾಡುವ ಮೂಲಕವಾಗಿ ನಗೆಗಡಲಲ್ಲಿ ತೇಲಿಸಿದರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಮಿಲಿಯನ್​​ಗೂ ಹೆಚ್ಚು ವೀಕ್ಷಣೆ ಪಡೆಯುತ್ತಿದೆ.

ಅನೇಕ ಮಕ್ಕಳು ತಮ್ಮ ಹೆತ್ತವರು ಮರುಮದುವೆ ಆಗುವುದನ್ನು ಭಾವನಾತ್ಮಕವಾಗಿ ಒಪ್ಪಿಕೊಳ್ಳುವುದಿಲ್ಲ. ಜೋರ್ಡಾನ್ ತನ್ನ ಮಲತಂದೆಯನ್ನು ತಮ್ಮ ಜೀವನದಲ್ಲಿ ಸಂತೋಷದಿಂದ ಸ್ವಾಗತಿಸಿದ ರೀತಿ ಎಲ್ಲರನ್ನು ಮೆಚ್ಚಿಸಿತು. ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.