Insulting Mother: ಪ್ರತಿದಿನ ಮದ್ಯಪಾನ ಮಾಡಿ ಮನೆಗೆ ಬಂತು ತನ್ನ ಹೆಂಡತಿಗೆ ಕಿರುಕುಳ ನೀಡುತ್ತಿದ್ದ ವ್ಯಕ್ತಿಯನ್ನು ಮಗ ಚಾಕುವಿನಿಂದ ಇರಿದು ಕೊಂದಿರುವ ಘಟನೆ ಆಂಧ್ರದ ಚಿತ್ತೂರು ಜಿಲ್ಲೆಯಲ್ಲಿ ಗುರುವಾರ ನಡೆದಿದೆ.
ಚಿತ್ತೂರಿನ ಸಂತಪೇಟೆ ಲೆನಿನ್ ನಗರ ಕಾಲೋನಿಯಲ್ಲಿ ವಾಸಿಸುವ ವೆಂಕಟ್ ರೆಡ್ಡಿ(50) ಮೃತ ಎಂದು ಗುರುತಿಸಲಾಗಿದೆ. ಆತನ ಮಗ ಸೋಮಶೇಖರ ರೆಡ್ಡಿಯನ್ನು ಪೊಲೀಸರು ಬಂಧಿಸಿದ್ದಾರೆ.
ವೃತ್ತಿಯಲ್ಲಿ ಚಾಲಕನಾಗಿದ್ದ ವೆಂಕಟ್ ರೆಡ್ಡಿ ಪ್ರತಿದಿನ ಮದ್ಯಪಾನ ಮಾಡಿ ತನ್ನ ಹೆಂಡತಿಗೆ ಹೊಡೆಯೊದು, ಕಿರುಕುಳ ನೀಡುತ್ತದ್ದನು. ಇದನ್ನು ದಿನಾ ಮಗ ಸೋಮಶೇಖರ ರೆಡ್ಡಿ ಈ ಮೊದಲ ಅಪ್ಪನ ವಿರುದ್ಧ ಪೊಲೀಸ್ ದೂರು ನೀಡಿದ್ದ. ಪೊಲೀಸರು ಕೂಡ ಆತನಿಗೆ ಬುದ್ಧಿವಾದ ಹೇಳಿ ಮನೆಗೆ ಕಳುಹಿಸದ್ದರು. ಹೀಗಾದರೂ ತನ್ನ ಹಳೆಯ ಚಾಳಿಯನ್ನು ಬೀಡದ ವೆಂಕಟರೆಡ್ಡಿ ಮತ್ತೆ ಕುಡಿದು ಹೆಂಡತಿಯನ್ನು ಹೊಡೆಯಲು ಶುರು ಮಾಡಿದ್ದಾನೆ. ಈ ಘಟನೆ ಗುರುವಾರ ಮತ್ತೆ ಮರುಕಳುಹಿದೆ. ಇದನ್ನ ಸಹಿಸದ ಮಗ ಸೋಮಶೇಖರ ರೆಡ್ಡಿ ಚಾಕುವಿನಿಂದ ಇರಿದು ಕೊಂದಿದ್ದಾನೆ. ಈ ಕುರಿತು ಚಿತ್ತೂರಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.(ಏಜೆನ್ಸೀಸ್)