ಬೆಂಗಳೂರು: ನಟ ಕಿಚ್ಚ ಸುದೀಪ್ ಅವರು ತಮ್ಮ ಹುಟ್ಟುಹಬ್ಬಕ್ಕೂ ಮುನ್ನ ಸುದ್ದಿಗೋಷ್ಠಿ ನಡೆಸಿ ಒಂದಷ್ಟು ವಿಚಾರ ಹಂಚಿಕೊಂಡಿದ್ದಾರೆ. ಈ ಹಿಂದೆ ಹಲವಾರು ಬಾರಿ ಕಿಚ್ಚ ಸುದೀಪ್ ಅವರು ರಾಜಕೀಯಕ್ಕೆ ಬರುವ ಬಗ್ಗೆ ಮಾತನಾಡಿದ್ದರು. ಇದೀಗ ಈ ಸಂಬಂಧ ಮತ್ತೊಮ್ಮೆ ರಾಜಕೀಯದಲ್ಲಿ ತಮಗಿರುವ ಆಸಕ್ತಿಯನ್ನು ಹೊರಹಾಕಿದ್ದಾರೆ.
ಇದನ್ನೂ ಓದಿ: 250 ಮಿಲಿಯನ್ ಜಿಮೇಲ್ ಖಾತೆಗಳಿಗೆ ಅಪಾಯ; ಜಿಮೇಲ್ ಬಳಕೆದಾರರಿಗೆ ಎಚ್ಚರಿಕೆ ನೀಡಿದ ಗೂಗಲ್| Google Alert
ಸದ್ಯಕ್ಕೆ ರಾಜಕೀಯಕ್ಕೆ ಬರುವ ಅಲೋಚನೆ ನನಗೆ ಇಲ್ಲ. ಆದರೆ ಅಗಾಗ ಕೆಲವರು ರಾಜಕೀಯದ ಬಗ್ಗೆ ಯೋಚನೆ ಮಾಡುವಂತೆ ಮಾಡುತ್ತಾರೆ ಎಂದು ಸುದೀಪ್ ಹೇಳಿದ್ದಾರೆ. ಈಗ ಸಿದ್ದರಾಮಯ್ಯ ಅವರಿಗೆ ಅವರದ್ದೇ ಅದ ತಲೆನೋವು ಇದೆ. ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಅಲೋಚನೆ ಅವರಿಗಿರಲ್ಲ. ನಾನು ನನ್ನ ಕೆಲವು ಕಾರ್ಯಕ್ರಮಗಳಿಗಾಗಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡುತ್ತೇನೆ ಅಷ್ಟೆ ಎಂದಿದ್ದಾರೆ.
ವಿಷ್ಣು ಸರ್ ಸ್ಮಾರಕಕ್ಕೆ ನಾಳೆ ನಿಮಗೆ ಸರಿಯಾದ ಚಿತ್ರಣ ಸಿಗುತ್ತೆ. ಬ್ಲ್ಯೂ ಪ್ರಿಂಟ್ ಸಿಗುತ್ತೆ, ಲೈಬ್ರರಿ ಇದೆ, ತುಂಬಾ ಚೆನ್ನಾಗಿ ಬಂದಿದೆ. ಆ ಜಾಗದ ಸಮಸ್ಯೆ ಇರೋದು ಅದರ ಪಾಡಿಗೆ ಅದು ಆಗ್ತಿದೆ. ನಾವು ನಮ್ಮ ಕೆಲಸ ಮುಂದುವರೆಸಿದ್ದೀವಿ. ನಮ್ಮ ಕೆಲಸ ನಾವು ಮಾಡೋಣ ಅಂತ ಏನಾದ್ರೂ ನಾವೇ ಮಾಡೋಣ ಅಂತ ಈ ಹೆಜ್ಜೆ ಇಟ್ಟಿದ್ದೀವಿ. ವಿಷ್ಣುವರ್ಧನ್ ಅವರ ಜಾಗ ಕಮರ್ಷಿಯಲ್ ಆಗಲ್ಲ. ಮುಂದೆ ಅದನ್ನ ನೋಡಿಕೊಳ್ತಿರೋದು ವಿಷ್ಣುವರ್ಧನ್ ಅಭಿಮಾನಿಗಳು ಎಂದಿದ್ದಾರೆ.
(ಏಜೆನ್ಸೀಸ್)
ಕಿಚ್ಚ 47 ಸಿನಿಮಾ ಕ್ರಿಸ್ ಮಸ್ ಗೆ ಬರೋದು ಗ್ಯಾರಂಟಿ. ನಾನು ಪಾರ್ಕ್ನ್ನು ದತ್ತು ತೆಗೆದುಕೊಂಡು ಅಮ್ಮನ ಹೆಸರಲ್ಲಿ ಸಸಿ ನೆಡುತ್ತಿದ್ದೇನೆ. ಇವತ್ತು ರಾತ್ರಿ 9 ಗಂಟೆಗೆ ನನ್ನ ಹುಟ್ಟು ಹಬ್ಬದ ಆಚರಣೆ ಶುರು ಆಗಲಿದೆ. ಅಲ್ಲಿ ಬರುವ ಎಲ್ಲಾ ಅಭಿಮಾನಿಗಳಿಗೆ ಊಟದ ವ್ಯವಸ್ಥೆ ಇರುತ್ತೆ. 9 ಗಂಟೆಯಿಂದ 12 ಗಂಟೆವರೆಗೆ ಅಭಿಮಾನಿಗಳ ಭೇಟಿ ಮಾಡುತ್ತೇನೆ ಎಂದು ಕಿಚ್ಚ ಹೇಳಿದ್ದಾರೆ.