ಮುಂಬೈ: ಬಾಲಿವುಡ್ ಬಿಗ್ಬಿ ಅಮಿತಾಭ್ ಬಚ್ಚನ್(Amithabh Bachchan) ಅವರು ಕುರಿತು ಪರಿಚಯದ ಅಗತ್ಯವಿಲ್ಲ. ಈ ಆಂಗ್ರಿ ಯಂಗ್ ಮ್ಯಾನ್ ತಮ್ಮ ಅಭಿನಯದಿಂದ ಮಾತ್ರವಲ್ಲ ಅವರ ವಾಯ್ಸ್ಗೆ ಫಿದಾ ಆಗದವರೇ ಇಲ್ಲ ಎನ್ನಬಹುದು. ಭಾರತದಲ್ಲಿ ಮಾತ್ರವಲ್ಲ ವಿದೇಶದಲ್ಲೂ ತಮ್ಮದೇ ಅಭಿಮಾನಿ ಬಳಗವನ್ನು ಅಮಿತಾಭ್ ಹೊಂದಿದ್ದಾರೆ.
ಇದನ್ನು ಓದಿ: ನನ್ನ ಮಗ ರೋಲ್ಸ್ ರಾಯ್ಸ್ನಲ್ಲಿ ಶಾಲೆಗೆ ಹೋಗುತ್ತಿದ್ದ; ಎಲಾನ್ ಮಸ್ಕ್ ಹೇಳಿಕೆ ತಿರಸ್ಕರಿಸಿದ ಎರೋಲ್ ಮಸ್ಕ್ | Errol Musk
ಅಮಿತಾಭ್ ಬಚ್ಚನ್ ಅವರ ಸಿನಿಮಾವನ್ನು ರಿಲೀಸ್ ಆದ ಮೊದಲ ದಿನವೇ ನೊಡಿ ಖುಷಿಪಟ್ಟವರು ಎಷ್ಟೋ ಮಂದಿ ಇದ್ದಾರೆ. ಅಂದ್ಹಾಗೆ ಇಲ್ಲಿ ನಾವು ಅಮಿತಾಭ್ ಬಚ್ಚನ್ ನಟನೆಯ ಇಂದಿಗೂ ಬಿಡುಗಡೆಯಾದ ಸಿನಿಮಾಗಳ ಕುರಿತು ತಿಳಿಸುತ್ತಿದ್ದೇವೆ. ಅಮಿತಾಭ್ ಬಚ್ಚನ್ ಮತ್ತು ರೇಖಾ ಜೋಡಿಯು ದುಲಾಲ್ ಗುಹಾ ಅವರ ದೋ ಅಂಜಾನೆ ಚಿತ್ರದಲ್ಲಿ ಮೊದಲು ಕಾಣಿಸಿಕೊಂಡಿತು. ಆದರೆ ಈ ಚಿತ್ರಕ್ಕೆ ಮುಂಚೆಯೇ ಅಮಿತಾಭ್ ಮತ್ತು ರೇಖಾ ಮತ್ತೊಂದು ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಅಮಿತಾಭ್ ಅವರ ಆ ಚಿತ್ರ ಬಿಡುಗಡೆಯಾಗಲಿಲ್ಲ. ಆ ಸಿನಿಮಾದ ಹೆಸರು ಅಪ್ನಾ ಪರಾಯ.
ಅಮಿತಾಭ್ ಬಚ್ಚನ್ ಮತ್ತು ಸುಜಿತ್ ಸಿರ್ಕಾರ್ ಶೂಬೈಟ್ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಕಾನೂನು ಕಾರಣಗಳಿಂದ ಚಲನಚಿತ್ರವನ್ನು ಸ್ಥಗಿತಗೊಳಿಸಲಾಯಿತು ಎಂದು ಕೆಲವು ವರದಿಗಳು ತಿಳಿಸಿವೆ. ಅಮಿತಾಭ್ ಬಚ್ಚನ್, ಜಯಾ ಬಚ್ಚನ್ ಮತ್ತು ರೇಖಾ ಒಟ್ಟಿಗೆ ಕಾಣಿಸಿಕೊಳ್ಳಬೇಕಿದ್ದ ಮತ್ತೊಂದು ಸಿನಿಮಾವನ್ನು ಹಣದ ಕೊರತೆಯಿಂದ ನಿಲ್ಲಿಸಬೇಕಾಯಿತು ಎನ್ನಲಾಗಿದೆ. ಆದರೆ ಆ ಸಿನಿಮಾದ ಹೆಸರು ಬಹಿರಂಗವಾಗಿಲ್ಲ.
ಅದಷ್ಟೆ ಅಲ್ಲ, ಪರ್ವೀನ್ ಬಾಬಿ, ಖಾದರ್ ಖಾನ್ ಮತ್ತು ಶಕ್ತಿ ಕಪೂರ್ ಅಮಿತಾಭ್ ಬಚ್ಚನ್ ಅವರ ಸರ್ಫರೋಶ್ ಚಿತ್ರದಲ್ಲಿ ಒಟ್ಟಿಗೆ ಬರಬೇಕಿತ್ತು. ಆದರೆ ಚಿತ್ರವು ಸ್ಥಗಿತಗೊಂಡಿತು. ಇದಕ್ಕೆ ಕಾರಣ ಏನೆಂಬುದು ತಿಳಿದಿಲ್ಲ.(ಏಜೆನ್ಸೀಸ್)