ನ್ಯೂಸ್

ಮುಂದಿನ ಸಭೆಯೊಳಗೆ ಸಮಸ್ಯೆ ಬಗೆಹರಿಸಿ

ಸೋಮಶೇಖರ ಎನ್

ಸೊರಬ: ಪಟ್ಟಣದ ತಾಲೂಕ ಕಚೇರಿಯಲ್ಲಿ ಶುಕ್ರವಾರ ಶಿವಮೊಗ್ಗ ಲೋಕಾಯುಕ್ತ ಪಿಎಸ್‌ಐ ಪ್ರಕಾಶ್ ಅವರಿಂದ ಸಾರ್ವಜನಿಕ ಕುಂದು ಕೊರತೆಗಳ ಸಭೆ ನಡೆಯಿತು.

ಅರಣ್ಯ ಇಲಾಖೆ, ಕಂದಾಯ, ಪುರಸಭೆ, ಮೆಸ್ಕಾಂ, ಚನ್ನಪಟ್ಟಣದಿಂದ ನ್ಯಾರ್ಶಿವರೆಗೆ ಕಳಪೆ ರಸ್ತೆ ಕಾಮಗಾರಿ ಸೇರಿ ಇತರ ವಿಷಯ ಕುರಿತು ಅರ್ಜಿಗಳು ಸಲ್ಲಿಕೆಯಾದವು. ಸಮಸ್ಯೆಗಳು ಇಲಾಖೆ ಮಟ್ಟದ ಅಧಿಕಾರಿ ಹಂತದಲ್ಲಿ ಇರುವುದರಿಂದ ಆಯಾ ಇಲಾಖೆಗೆ ಸಂಬಂಧಿಸಿದ ಅರ್ಜಿಗಳನ್ನು ವರ್ಗಾಯಿಸಿ ಸಮಸ್ಯೆಗಳನ್ನು ಮುಂದಿನ ಸಭೆಯೊಳಗೆ ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಗ್ರೇಡ್-2 ತಹಸೀಲ್ದಾರ್ ನಾಗರಾಜ್, ಇಒ ಡಾ. ಪ್ರದೀಪ್‌ಕುಮಾರ್, ಪುರಸಭೆ ಮುಖ್ಯಾಧಿಕಾರಿ ಚಂದನ್, ನಿರ್ಮಲಾ ಹಾಗೂ ತಾಲೂಕ ಮಟ್ಟದ ಅಧಿಕಾರಗಳಿದ್ದರು.