ಕೋಲಾರ: ಸರ್ಕಾರ ರೈತರಿಗೆ 30 ರಿಂದ 40 ವರ್ಷಗಳಿಂದ ಭೂಮಿ ಮಂಜೂರು ಮಾಡಿದ್ದರೂ ಪೋಡಿ ಮತ್ತು ದುರಸ್ತಿ ಮಾಡಿ ಕೊಡಲು ಅನೇಕ ಸಮಸ್ಯೆಗಳಿದ್ದು, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಹಂತ ಹಂತವಾಗಿ ಬಗೆಹರಿಸಲಾಗುತ್ತಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.
ವಿಧಾನ ಪರಿಷತ್ ಅಧಿವೇಶನದಲ್ಲಿ ಮಂಗಳವಾರ ವಿಧಾನಪರಿಷತ್ ಸದಸ್ಯ ಎಂ.ಎಲ್.ಅನಿಲ್‌ಕುಮಾರ್, ಪಿ ನಂಬರ್ ದುರಸ್ತಿ ಬಗ್ಗೆ ಪ್ರಸ್ತಾಪಿಸಿದ ಪ್ರಶ್ನೆಗೆ ಉತ್ತರಿಸಿದರು.
ಈ ರೀತಿ ರಾಜ್ಯದಲ್ಲಿ ಲಕ್ಷಾಂತರ ಪ್ರಕರಣ ಬಾಕಿ ಇದೆ. ಆದರೆ ಇದರಲ್ಲಿ ಅನೇಕ ಸಮಸ್ಯೆಗಳಿದ್ದು, ಮಂಜೂರಾಗಿರುವ ವಿಸ್ತೀರ್ಣಕ್ಕಿಂತ ಜಮೀನು ಕಡಿಮೆ ಇರುವುದರಿಂದ ತುಂಬಾ ಸಮಸ್ಯೆ ಎದುರಾಗಿವೆೆ. ನಮ್ಮ ಸರ್ಕಾರ ಅಽಕಾರಕ್ಕೆ ಬಂದ ನಂತರ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಪಾರದರ್ಶಕವಾಗಿ ಮಾಡಲು ಕ್ರಮವಹಿಸಿದ್ದು, ನಿಯಮ 15 ಮತ್ತು 610ನ್ನು ಗಣಕೀಕೃತಗೊಳಿಸಿ 15 ನ್ನು ಆನ್‌ಲೈನಲ್ಲಿ ಸಲ್ಲಿಸಿ ಹೊಂದಾಣಿಕೆಯಾದ ನಂತರ 610 ಮಾಡುತ್ತೇವೆ ಎಂದು ತಿಳಿಸಿದರು.
ಹೊಂದಾಣಿಕೆಯಾಗದ ಜಮೀನುಗಳಿಗೆ ತಹಸೀಲ್ದಾರ್ ಮತ್ತು ವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ಸಮಸ್ಯೆ ಬಗೆಹರಿಸುತ್ತೇವೆ. ಇದಕ್ಕೆ ಪ್ರತ್ಯೇಕ ತಂತ್ರಾಂಶ ಅಳವಡಿಸಲಾಗಿದೆ. ಈಗಾಗಲೇ ಎಲ್ಲ ತಾಲೂಕುಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಇನ್ನು ಮುಂದೆ ಇದರ ಬಗ್ಗೆ ಸರ್ಕಾರವೇ ಜವಾಬ್ದಾರಿ ಪಡೆದು ನಿಯಮ 15 ಮತ್ತು 610 ಮಾಡಲು ಚಾಲನೆ ನೀಡಿದ್ದು, ಸರ್ವೇಯರ್ ಕೊರತೆ ಇರುವ ಕಾರಣ ಸರ್ವೇಯರ್ ಮತ್ತು ಎಡಿಎಲ್‌ಆರ್‌ಗಳ ನೇಮಕಾತಿಗೆ ಸಿಎಂ ಅನುಮತಿ ನೀಡಿದ್ದಾರೆ. ಈಗ ಕರ್ತವ್ಯ ನಿರ್ವಹಿಸುತ್ತಿರುವ ಸರ್ವೇಯರ್‌ಗಳಿಗೆ ಆಧುನಿಕ ಸರ್ವೇ ಉಪಕರಣ ಖರೀದಿಸಲು ಟೆಂಡರ್ ಕರೆದಿದ್ದು, ಮುಂದಿನ ದಿನಗಳಲ್ಲಿ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲು ಕ್ರಮವಹಿಸಲಾಗುವುದು ಎಂದು ಸಚಿವರು ತಿಳಿಸಿದರು.
ಎಂಎಲ್‌ಸಿ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ, ನಿಯಮ ೩೩೦ರಡಿ ರಾಜ್ಯದ ಭೂ ರೈತರು ಮತ್ತು ಬಡ ರೈತರಿಗೆ ಸರ್ಕಾರದಿಂದ ಮಂಜೂರಾದ ಜಮೀನಿಗೆ ಪಿ ನಂಬರ್‌ನಿಂದ ದುರಸ್ತಿಯಾಗದೆ ರೈತರು ನಿತ್ಯ ಶೇ.50 ಪಿ ನಂಬರ್ ಸಮಸ್ಯೆಗೆ ಮತ್ತು ದುರಸ್ತಿಗಾಗಿ ಇಲಾಖÉಯ ಕಚೇರಿಗೆ ಅಲೆದಾಡುತ್ತಿರುತ್ತಾರೆ. ಈ ಸಮಸ್ಯೆಯಿಂದ ರೈತರ ಜಮೀನಿಗೆ ಹದ್ದುಬಸ್ತು ಗುರುತಿಸಲು ಸಾಧ್ಯವಾಗುತ್ತಿಲ್ಲ. ಪಾವತಿ ಖÁತೆಯಾಗುತ್ತಿಲ್ಲ, ಬ್ಯಾಂಕಿನಲ್ಲಿ ಸಾಲ ನೀಡುತ್ತಿಲ್ಲ, ಪರಭಾರೆ ಆಗುತ್ತಿಲ್ಲ ಎಂದು ತಿಳಿಸಿದರು.