ನ್ಯೂಸ್

ಸೋಲಾರ್ ಬೋರ್‌ವೆಲ್‌ನಲ್ಲಿ ಶೇ.43 ಸಾಧನೆ

ಬೆಂಗಳೂರು:
ಸೋಲಾರ್ ಅಳವಡಿಸಿ ಬೋರ್‌ವೆಲ್ ಮೂಲಕ ನೀರು ಎತ್ತುವ ಯೋಜನೆಯಲ್ಲಿ ಶೇ.43ರಷ್ಟು ಮಾತ್ರ ಸಾಧನೆ ಮಾಡಲಾಗಿದೆ.
ಕೆಂದ್ರ ಸರ್ಕಾರದ ನವೀನ ಮತ್ತು ನವೀಕರಿಸಬಹುದಾದ ಇಂಧನ ಮಂತ್ರಾಲಯದಿಂದ ವಿಧಿಸಲಾದಂತ ದಂಡ ಮತ್ತು ರಾಜ್ಯ ಸರ್ಕಾರದಿಂದ ಬರಬೇಕಾದ ಬಾಕಿಯನ್ನು ಸ್ವೀಕರಿಸದೆ ಇರುವ ಕಾರಣಕ್ಕಾಗಿ ರಾಜ್ಯ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮ 2.64 ಕೋಟಿ ರೂ ನಷ್ಟ ಅನುಭವಿಸಿದೆ ಎಂದು ಪ್ರಧಾನ ಮಹಾಲೇಖಪಾಲರ ಲೆಕ್ಕ ಪರಿಶೋಧನೆಯಲ್ಲಿ ತಿಳಿಸಲಾಗಿದೆ.
ರಾಜ್ಯದಲ್ಲಿ ಸಾರ್ವಜನಿಕ ವಲಯದಲ್ಲಿರುವ 125 ಉದ್ದಿಮೆಗಳಲ್ಲಿ 11 ಕಂಪನಿಗಳು ಸ್ಥಗಿತಗೊಂಡಿರುವುದನ್ನು ಉಲ್ಲೇಖಿಸಲಾಗಿದೆ.
ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಕಟ್ಟಣ ನಿರ್ಮಾಣ ವಿಳಂಬವಾಗಿದ್ದರಿಂದ 12.78 ಕೋಟಿ ರೂ ನಷ್ಟವಾಗಿದೆ. ನಿಗಧಿತ ಅವಧಿಯಲ್ಲಿ ಕಟ್ಟಡ ನಿರ್ಮಾಣಗೊಂಡಿದ್ದರೆ, ಬಾಡಿಗೆ ಪಾವತಿಯನ್ನು ಉಳಿಸಬಹುದಾಗಿತ್ತು ಎಂದು ತಿಳಿಸಲಾಗಿದೆ.