ನ್ಯೂಸ್

ಅಯೋಧ್ಯೆ ರಾಮ ಮಂದಿರ ಭೂಮಿಪೂಜೆಗೆ ಆರ್​ಎಸ್​ಎಸ್​ ಕೇಂದ್ರ ಕಚೇರಿಯಿಂದ ಮಣ್ಣು ರವಾನೆ

ನಾಗಪುರ: ಅಯೋಧ್ಯೆಯಲ್ಲಿ ಆಗಸ್ಟ್​ 5ರಂದು ನಡೆಯಲಿರುವ ಶ್ರೀರಾಮ ಮಂದಿರದ ಭೂಮಿ ಪೂಜೆ ಕಾರ್ಯಕ್ರಮಕ್ಕಾಗಿ ರಾಷ್ಟ್ರಿಯ ಸ್ವಯಂ ಸೇವಕ ಸಂಘದ ಕೇಂದ್ರ ಕಚೇರಿ ಹಾಗೂ ರಾಮತೇಕ್​ನ ಶ್ರೀರಾಮ ಮಂದಿರದಿಂದ ಮಣ್ಣು ರವಾನೆ ಮಾಡಲಾಗಿದೆ.

ರಾಮತೇಕ್​ ಮಂದಿರ ಹಾಗೂ ಆರ್​ಎಸ್​ಎಸ್​ ಕೇಂದ್ರ ಕಚೇರಿಯಿಂದ ಮಣ್ಣು ಹಾಗೂ ನಾಗಪುರದ ನದಿಗಳ ನೀರನ್ನು ಕೂಡ ಅಯೋಧ್ಯೆಗೆ ಕಳುಹಿಸಲಾಗಿದೆ ಎಂದು ವಿಶ್ವ ಹಿಂದು ಪರಿಷದ್​ನ ವಿದರ್ಭ್​ ಪ್ರಾಂತ ಪ್ರಮುಖ್​ ಗೋವಿಂಡ್​ ಶೆಂಡೆ ಮಾಹಿತಿ ನೀಡಿದ್ದಾರೆ.

ದೇಶದೆಲ್ಲೆಡೆಯ ಧಾರ್ಮಿಕ ಸ್ಥಳಗಳ ಮಣ್ಣು ಹಾಗೂ ನದಿಗಳ ನೀರನ್ನು ಸಂಗ್ರಹಿಸಿ ಸಾವಿರಾರು ಸಂಖ್ಯೆಯಲ್ಲಿ ಜನರು ಅಯೋಧ್ಯೆಗೆ ತೆರಳಬೇಕಿತ್ತು. ಆದರೆ, ಕೋವಿಡ್​ ಸಂಕಷ್ಟ ಕಾರಣದಿಂದಾಗಿ ಇದು ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದ್ದಾರೆ.

ಅಲ್ಲದೇ, ಆಗಸ್ಟ್​ 5ರಂದು ತರಾತುರಿಯಲ್ಲಿ ಭೂಮಿ ಪೂಜೆ ನಡೆಯಲಿರುವುದರಿಂದ ದೇಶದೆಲ್ಲೆಡೆಯ ಜನರಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲಾಗುತ್ತಿಲ್ಲ. ಮಣ್ಣು ಹಾಗೂ ನೀರನ್ನು ಕೊರಿಯರ್​ ಮೂಲಕ ಕಳುಹಿಸಲಾಗುತ್ತಿದೆ ಎಮದು ಮಾಹಿತಿ ನೀಡಿದರು.