ಚಿಕ್ಕೋಡಿ ಗ್ರಾಮೀಣ: ಚಿಕ್ಕೋಡಿ ತಾಲೂಕಿನ ನೇಜ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಕ್ಕೆ ಈಚೆಗೆ ಜರುಗಿದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷರಾಗಿ ಬಸಗೌಡ ಪಾಟೀಲ, ಉಪಾಧ್ಯಕ್ಷೆಯಾಗಿ ಜೀಜಾದೇವಿ ಶಿತೋಳೆ ಅವಿರೋಧವಾಗಿ ಆಯ್ಕೆಯಾದರು.
ಆಡಳಿತ ಮಂಡಳಿ ಸದಸ್ಯರಾಗಿ ಅಣ್ಣಾಸಾಹೇಬ ಮಗದುಮ್ಮ, ಅಶೋಕ ಗುಳಗುಳೆ, ಬಸಗೌಡ ಮುದ್ದಾಯಿ, ಸದಾಶಿವ ನಾಶಿಪುಡೆ, ಶಿವಾನಂದ ಶಿರಗಾಂವೆ, ಆನಂದ ವಡೇರ, ಅಪ್ಪಾಸಾಹೇಬ ಜೇಡರ, ಪುನಮ ಕಮತಮಾಳಿ, ನಿಂಗಪ್ಪ ಕಾಂಬಳೆ, ಅಣ್ಣಪ್ಪ ನಾಯಿಕ ಅವಿರೋಧವಾಗಿ ಆಯ್ಕೆಯಾದರು ಎಂದು ಚುನಾವಣಾಧಿಕಾರಿ ಅಮಿತ ಶಿಂಧೆ ತಿಳಿಸಿದರು.
ಅಧ್ಯಕ್ಷ ಬಸಗೌಡ ಪಾಟೀಲ, ಉಪಾಧ್ಯಕ್ಷೆ ಜೀಜಾದೇವಿ ಶಿತೋಳೆ ಅವರನ್ನು ಸತ್ಕರಿಸಲಾಯಿತು. ಅಜಯಸಿಂಗ ಶಿತೋಳೆ, ಅಣ್ಣಪ್ಪ ಕಮತೆ, ಓಂಕಾರ ಪಾಟೀಲ, ಸುನೀಲ ಚಿಂಚಣೆ ಇತರರು ಇದ್ದರು.