ಕುವೆಂಪು ರಂಗಮಂದಿರದಲ್ಲಿ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಅವರ ಜನ್ಮದಿನದ ನಿಮಿತ್ತ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.  
ನ್ಯೂಸ್

ಸಮಾಜಮುಖಿ ಕಾರ್ಯದಿಂದ ಬದುಕು ಸಾರ್ಥಕ; ಬೆಕ್ಕಿನಕಲ್ಮಠ ಶ್ರೀ

ನವೀನ ಬಿ.ಎಂ

ಶಿವಮೊಗ್ಗ: ಜನ್ಮದಿನ, ಜಯಂತಿ ಎಂಬುದು ನಿಮಿತ್ತ, ನೆಪ ಮಾತ್ರ. ಅದರ ಮೂಲಕ ಸಮಾಜ ಕಲ್ಯಾಣ ಚಟುವಟಿಕೆಗಳನ್ನು ಕೈಗೊಂಡಾಗ ಮಾತ್ರ ಬದುಕು ಸಾರ್ಥಕವಾಗುತ್ತದೆ. ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹಲವು ವರ್ಷಗಳಿಂದ ತಮ್ಮ ಜನ್ಮದಿನವನ್ನು ಸಮಾಜಮುಖಿ ಕಾರ್ಯಗಳ ಮೂಲಕ ಆಚರಿಸಿಕೊಳ್ಳುತ್ತಿರುವುದು ಎಲ್ಲರಿಗೂ ಮಾದರಿ ಎಂದು ಬೆಕ್ಕಿನಕಲ್ಮಠದ ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.

ಕುವೆಂಪು ರಂಗಮಂದಿರದಲ್ಲಿ ಶ್ರೀ ಮಾರಿಕಾಂಬಾ ಮೈಕ್ರೋ ಫೈನಾನ್ಸ್ ಪ್ರೈ.ಲಿ. ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರ ಅಮೃತ ಸಂಭ್ರಮ ಪ್ರಯುಕ್ತ ಶನಿವಾರ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ಸಾಲದ ಚೆಕ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದ ಶ್ರೀಗಳು, ಜನ್ಮದಿನದ ಆಚರಣೆಗಳು ರಚನಾತ್ಮಕ ಕೆಲಸಗಳಿಗೆ ಪ್ರೇರಣೆ ಆಗಬೇಕಿದೆ. ಆ ನಿಟ್ಟಿನಲ್ಲಿ ಇಂದಿನ ಕಾರ್ಯಕ್ರಮ ಸ್ತುತ್ಯಾರ್ಹ ಎಂದರು.
ಮಹಿಳೆಯರು ಸಾಮಾಜಿಕವಾಗಿ ಸದೃಢವಾಗಿರಬೇಕು. ಆರ್ಥಿಕವಾಗಿ ಪ್ರಬಲರಾಗಬೇಕು. ಮಾತೆಯರಿಗೆ ಜಗತ್ತಿನಲ್ಲಿ ಎಲ್ಲವನ್ನೂ ಒಳಗೊಳ್ಳುವ ಶಕ್ತಿ ಇದೆ. ಮನೆಯೊಡತಿ ಇಲ್ಲದಿದ್ದರೆ ಅದು ಮನೆ ಎನ್ನಿಸಿಕೊಳ್ಳುವುದಿಲ್ಲ. ಮನೆಯೊಡತಿ ಮತ್ತು ಮನೆಗೂ ಅವಿನಾಭಾವ ಸಂಬಂಧವಿದೆ. ಮನೆಯಲ್ಲಿರುವ ವಸ್ತುಗಳ ಮೂಲಕ ಸಿರಿವಂತಿಕೆಯನ್ನು ಅಳೆಯಬೇಕಿಲ್ಲ. ಅಲ್ಲಿರುವ ಸಂಸ್ಕಾರದಿಂದ ಅದನ್ನು ಅಳೆಯಬೇಕು ಎಂದು ಸಲಹೆ ನೀಡಿದರು.
ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ಚಿತ್ರನಟಿ ತಾರಾ ಅನುರಾಧಾ
ಫೈನಾನ್ಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ಕೆ.ಇ.ಕಾಂತೇಶ್, ಮೇಯರ್ ಎಸ್.ಶಿವಕುಮಾರ್, ಉಪ ಮೇಯರ್ ಲಕ್ಷ್ಮೀ ಶಂಕರನಾಯ್ಕ, ಫೈನಾನ್ಸ್‌ನ ನಿರ್ದೇಶಕ ಕೆ.ಶಂಕರ್ ಇದ್ದರು.