ಫ್ರೆಂಡ್ಸ್ ಸೆಂಟರ್‌ನಿಂದ ಏರ್ಪಡಿಸಿದ್ದ ಸಭೆಯಲ್ಲಿ ಕೆ.ನರಸಿಂಹಮೂರ್ತಿ, ಸಿ.ಕೆ.ಶ್ರೀನಿವಾಸ ಮೂರ್ತಿ, ಬಿ.ಭಾರ್ಗವ ರಾವ್, ಧ್ರುವಕುಮಾರ್ ಅವರನ್ನು ಸನ್ಮಾನಿಸಲಾಯಿತು. ಎಸ್.ದತ್ತಾತ್ರಿ, ವಿ.ನಾಗರಾಜ, ಜಿ.ವಿಜಯಕುಮಾರ್, ಲೋಕೇಶ್, ಉಮಾಶಂಕರ್ ಇದ್ದರು.  
ನ್ಯೂಸ್

ಫ್ರೆಂಡ್ಸ್ ಸೆಂಟರ್‌ನಿಂದ ಸಮಾಜಮುಖಿ ಕಾರ್ಯ

ಅರವಿಂದ ಅಕ್ಲಾಪುರ

ಶಿವಮೊಗ್ಗ: ಐದು ದಶಕಗಳಿಂದ ಸಮಾಜಮುಖಿಯಾಗಿ ಸೇವೆ ಸಲ್ಲಿಸುತ್ತಿರುವ ಫ್ರೆಂಡ್ಸ್ ಸೆಂಟರ್, ವೈವಿಧ್ಯ ರೀತಿಯಲ್ಲಿ ಸೇವಾ ಕಾರ್ಯಗಳನ್ನು ನಿರಂತರವಾಗಿ ನಡೆಸುತ್ತಿದೆ ಎಂದು ಫ್ರೆಂಡ್ಸ್ ಸೆಂಟರ್ ಸಂಸ್ಥಾಪಕ ಅಧ್ಯಕ್ಷ ಉಮಾಶಂಕರ್ ಹೇಳಿದರು.

ಬೆಂಗಳೂರಿನಲ್ಲಿ ಫ್ರೆಂಡ್ಸ್ ಸೆಂಟರ್‌ನಿಂದ ಏರ್ಪಡಿಸಿದ್ದ ಪ್ರವರ್ತಕರ ಸನ್ಮಾನ ಸಭೆಯಲ್ಲಿ ಮಾತನಾಡಿ, ನಾಲ್ವರು ಸೇರಿ ಸ್ಥಾಪಿಸಿದ ಸಂಸ್ಥೆ ಇಂದು ರಾಜ್ಯದಲ್ಲಿ ಮಾದರಿಯಾಗಿ ಬೆಳೆದಿದೆ. ಐದು ದಶಕಗಳಲ್ಲಿ ರಾಜ್ಯಮಟ್ಟದ ಚರ್ಚಾ ಸ್ಪರ್ಧೆ, ನೇತ್ರದಾನ, ರಕ್ತದಾನ ಶಿಬಿರ ಹಾಗೂ ಸಮಾಜಮುಖಿ ಕಾರ್ಯಗಳ ಮೂಲಕ ಸಾರ್ವಜನಿಕರಿಗೆ ಸೇವೆ ಒದಗಿಸಿದೆ. ಮುಂಬರುವ ದಿನಗಳಲ್ಲೂ ಅನೇಕ ಸೇವಾ ಕಾರ್ಯಗಳನ್ನು ನಡೆಸಲಾಗುವುದು ಎಂದು ತಿಳಿಸಿದರು.
ಫ್ರೆಂಡ್ಸ್ ಸೆಂಟರ್ ಅಧ್ಯಕ್ಷ ಲೋಕೇಶ್ ಮಾತನಾಡಿ, ಫ್ರೆಂಡ್ಸ್ ಸೆಂಟರ್ ವಿಶೇಷವಾದ ಸಂಸ್ಥೆಯಾಗಿ ಕೆಲಸ ಮಾಡುತ್ತಿದೆ. ಸೇವೆ ಹಾಗೂ ಸಾಹಿತ್ಯ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದೆ ಎಂದರು.
ಸ್ಥಾಪಕ ಪದಾಧಿಕಾರಿಗಳಾದ ಕೆ.ನರಸಿಂಹಮೂರ್ತಿ, ಬಿ.ಭಾರ್ಗವ ರಾವ್, ಸಿ.ಕೆ.ಶ್ರೀನಿವಾಸ್, ಧ್ರುವಕುಮಾರ್ ಅವರನ್ನು ಸನ್ಮಾನಿಸಲಾಯಿತು. ಮಾಜಿ ಅಧ್ಯಕ್ಷರಾದ ಎಸ್.ದತ್ತಾತ್ರಿ, ಜಿ.ವಿಜಯಕುಮಾರ್, ವಿ.ನಾಗರಾಜ, ಜಿ.ಸತ್ಯನಾರಾಯಣ, ಟಿ.ಎನ್.ಲಕ್ಷ್ಮಿಕಾಂತ್, ಡಾ. ದೀಪಕ್, ಎಸ್.ವೆಂಕಟರಾಮ್, ವಿ.ಆರ್.ಅಡಿಗ, ಕಾರ್ಯದರ್ಶಿ ಮಲ್ಲಿಕಾರ್ಜುನ ಕಾನೂರು, ಮೋಹನಕುಮಾರ್ ಇದ್ದರು.