ಆನಂದಪುರ ಸಮೀಪದ ಮಲಂದೂರಿನ ಚಂಪಕ ಸರಸ್ಸು ಆವರಣದಲ್ಲಿ ದಸರಾ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದವರಿಗೆ ಪ್ರಮಾಣ ಪತ್ರ ವಿತರಿಸಿ, ಗಣ್ಯರನ್ನು ಸನ್ಮಾನಿಸಲಾಯಿತು. ಎಚ್.ಕೆ.ನಾಗಪ್ಪ, ಖಲೀಮುಲ್ಲಾ, ಶಾಂತಾ ನಾಯ್ಕ, ರವಿಕುಮಾರ್, ಬಿ.ಡಿ.ರವಿ, ಗಣಪತಿ ಇತರರಿದ್ದರು.  
ನ್ಯೂಸ್

ಸಾಂಸ್ಕೃತಿಕ ಚಟುವಟಿಕೆಗಳಿಂದ ಸಮಾಜ ಸುಧಾರಣೆ

ಆನಂದಪುರ: ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳಿಂದ ಸಾಮಾಜಿಕ ಸುಧಾರಣೆ ಸಾಧ್ಯವಾಗಬಲ್ಲದು ಎಂದು ಯಡೇಹಳ್ಳಿ ಗ್ರಾಪಂ ಅಧ್ಯಕ್ಷೆ ವೀಣಾ ರಾಜೇಶ್ ತಿಳಿಸಿದರು.

ಮಲಂದೂರಿನ ಐತಿಹಾಸಿಕ ಮಹಾಂತಮಠದ ಚಂಪಕ ಸರಸ್ಸು ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ದಸರಾ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ಜನಸಾಮಾನ್ಯರು ಬಿಡುವಿನ ಸಮಯದಲ್ಲಿ ಸಾಹಿತ್ಯ, ಸಾಂಸ್ಕೃತಿಕ ಕಲೆಗಳಲ್ಲಿ ತೊಡಗಿಕೊಳ್ಳಬೇಕು. ಇವುಗಳಿಂದ ಮನಸ್ಸು ವಿಶಾಲಗೊಂಡು ಭಾವೈಕ್ಯತೆ ಮೂಡುತ್ತದೆ ಎಂದರು.
ಸಾಗರ ತಾಲೂಕು ಕಸಾಪ ಅಧ್ಯಕ್ಷ ವಿ.ಟಿ.ಸ್ವಾಮಿ ಮಾತನಾಡಿ, ರಾಜಮಹಾರಾಜರ ಕಾಲದಲ್ಲಿ ಕವಿ ಮತ್ತು ಕಲಾವಿದರಿಗೆ ರಾಜಾಶ್ರಯ ದೊರೆಯುತ್ತಿತ್ತು. ಸ್ಥಳೀಯ ಆಡಳಿತ ಸಹ ಐತಿಹಾಸಿಕ ಸ್ಥಳಗಳ ಅಭಿವೃದ್ಧಿ ಮತ್ತು ಸಾಹಿತ್ಯ ಚಟುವಟಿಕೆಗಳಿಗೆ ಉತ್ತೇಜನ ನೀಡಬೇಕು ಎಂದರು.
ನಿವೃತ್ತ ಶಿಕ್ಷಕ ಎಚ್.ಕೆ.ನಾಗಪ್ಪ, ಆಚಾಪುರ ಗ್ರಾಪಂ ಅಧ್ಯಕ್ಷ ಖಲೀಮುಲ್ಲಾ, ಸಾಹಿತಿ ಕೆಳದಿ ವೆಂಕಟೇಶ್ ಜೋಷಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಶಾಂತಾ ನಾಯ್ಕ, ಸಾಮಾಜಿಕ ಕಾರ್ಯಕರ್ತ ರವಿಕುಮಾರ್, ಕಸಾಪ ಹೋಬಳಿ ಘಟಕದ ಅಧ್ಯಕ್ಷ ಬಿ.ಡಿ.ರವಿ, ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಗಣಪತಿ, ಇತಿಹಾಸ ಪರಂಪರೆ ಉಳಿಸಿ ಅಭಿಯಾನ ಟ್ರಸ್ಟ್ ಅಧ್ಯಕ್ಷ ಮಹಮದ್ ಜಿಯಾವುಲ್ಲಾ, ಪ್ರಮುಖರಾದ ಸಿ.ಮೂರ್ತಿ, ಆರ್.ಇಂಪನಾ, ಪ್ರತೀಕ್ಷಾ ಜೋಯಿಸ್ ಇನ್ನಿತರರಿದ್ದರು. ವಿಶೇಷ ಸಾಧನೆ ಮಾಡಿದವರಿಗೆ ಚಂಪಕ ದಸರಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸ್ಥಳೀಯ ಹಾಗೂ ಬೇರೆ ತಾಲೂಕುಗಳಿಂದ ಆಗಮಿಸಿದ್ದ ಕವಿಗಳು ಕವನ ವಾಚಿಸಿದರು.