ಹೊನ್ನಾಳಿ: ನ್ಯಾಮತಿ ತಾಲೂಕಿನ ಬಿದಿರಹಳ್ಳಿ ತಾಂಡಾದಲ್ಲಿ ಭಾನುವಾರ ಸಂಜೆ ಕರೊನಾ ಜಾಗೃತಿ ಮೂಡಿಸುತ್ತಿದ್ದ ಅಂಗನವಾಡಿ ಕಾರ್ಯಕರ್ತೆಯೊಬ್ಬರ ಮೇಲೆ ಗ್ರಾಮದ ಐದಾರು ಜನರು ಹಲ್ಲೆ ನಡೆಸಿದ್ದಾರೆ. ಶಶಿಕಲಾ ಹಲ್ಲೆಗೊಳಗಾದವರು. ಸಾಮಾಜಿಕ ಅಂತರ ಕಾಪಾಡಿಕೊಳ್ಳಿ, ಎಲ್ಲರೂ ಮಾಸ್ಕ್ ಧರಿಸಿಕೊಳ್ಳಿ ಎಂದು ಜಾಗೃತಿ ಮೂಡಿಸುತ್ತಿದ್ದಾಗ ಏಕಾಏಕಿ ಬಂದ ನಾಲ್ವರು ಹಲ್ಲೆ ನಡೆಸಿದ್ದಾರೆ.
ಮಾಸ್ಕ್ ನೀನು ಕೊಡಿಸು, ಇಲ್ಲಾಂದರೆ ಸುಮ್ಮನೆ ಹೋಗು. ನೀನೇನು ನಮಗೆ ಹೇಳೋದು ಎಂದು ಅಕ್ಷತಾ ಬಾಯಿ, ಸಂತೋಷ್ ನಾಯ್್ಕ ಅಭಿಲಾಶ್ ನಾಯ್್ಕ ಕುಮಾರನಾಯ್್ಕ ಎಂಬುವವರು ವಾದಿಸಿದರು ಎನ್ನಲಾಗಿದೆ. ನ್ಯಾಮತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರೂ ದಾಖಲಿಸಿಕೊಂಡಿಲ್ಲ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ನ್ಯಾಮತಿ ತಹಸೀಲ್ದಾರ್ ತನುಜಾ ಸೌದತ್ತಿ ಮತ್ತಿತರರು ಕಾರ್ಯಕರ್ತೆಯಿಂದ ಮಾಹಿತಿ ಪಡೆದು ಸಾಂತ್ವನ ಹೇಳಿದ್ದಾರೆ.